ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ) 2023–24ರ ಹಣಕಾಸು ವರ್ಷದ ಡಿಸೆಂಬರ್ ತ್ರೈಮಾಸಿಕದ ನಿವ್ವಳ ಲಾಭದಲ್ಲಿ ಶೇ14ರಷ್ಟು ಇಳಿಕೆ ಕಂಡಿದೆ.
ಕಚ್ಚಾ ತೈಲ ದರ ಇಳಿಕೆ ಮತ್ತು ಉತ್ಪಾದನೆ ಕಡಿಮೆ ಆಗಿರುವುದರಿಂದ ಲಾಭದಲ್ಲಿ ಇಳಿಕೆ ಆಗಿದೆ ಎಂದು ಕಂಪನಿ ಹೇಳಿದೆ.
ಕಂಪನಿಯು 2022–23ರ ಮೂರನೇ ತ್ರೈಮಾಸಿಕದಲ್ಲಿ ₹11,045 ಕೋಟಿ ನಿವ್ವಳ ಲಾಭ ಗಳಿಸಿತ್ತು. ಈ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ₹9,536 ಕೋಟಿ ಲಾಭ ಗಳಿಸಿದೆ. ಒಟ್ಟಾರೆ ಲಾಭದಲ್ಲಿ ಶೇ13.7ರಷ್ಟು ಇಳಿಕೆ ಕಂಡಿದೆ ಎಂದು ಕಂಪನಿ ತಿಳಿಸಿದೆ.
ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಕಚ್ಚಾ ತೈಲ ಬೆಲೆ ಶೇ 6.4 ಮತ್ತು ಅನಿಲ ಬೆಲೆ ಶೇ 24.2ರಷ್ಟು ಇಳಿಕೆಯಾಗಿದ್ದರೆ, ಉತ್ಪಾದನೆಯು ಕ್ರಮವಾಗಿ ಶೇ 3.3 ಮತ್ತು ಶೇ 4.3ರಷ್ಟು ಕಡಿಮೆ ಆಗಿದೆ. ಒಟ್ಟು ವರಮಾನವು ₹34,789 ಕೋಟಿ (ಶೇ 10ರಷ್ಟು) ಕುಸಿತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.