ನವದೆಹಲಿ: ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಈವರೆಗೆ ಆನ್‌ಲೈನ್ ಗೇಮಿಂಗ್ ಕಂಪನಿಗಳಿಗೆ ಒಟ್ಟು ₹1 ಲಕ್ಷ ಕೋಟಿ ಪಾವತಿಸುವಂತೆ ಜಿಎಸ್‌ಟಿ ಪ್ರಾಧಿಕಾರಗಳು ನೋಟಿಸ್ ನೀಡಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಆನ್‌ಲೈನ್ ಗೇಮಿಂಗ್‌ನಲ್ಲಿ ಪೂರ್ಣ ಬೆಟ್ಟಿಂಗ್ ಮೊತ್ತದ ಮೇಲೆ ಶೇ 28ರಷ್ಟು ತೆರಿಗೆಯು ಇದೇ ಅಕ್ಟೋಬರ್ 1ರಿಂದ ಜಾರಿಗೆ ಬಂದಿದೆ.
ಆನ್‌ಲೈನ್ ಗೇಮಿಂಗ್‌ಗೆ ಸಂಬಂಧಿಸಿದಂತೆ ಡ್ರೀಮ್11 ಮತ್ತು ಕ್ಯಾಸಿನೊ ನಡೆಸುವ ಡೆಲ್ಟಾ ಕಾರ್ಪ್ ಕಂಪನಿಗಳಿಗೆ ಕಡಿಮೆ ಪ್ರಮಾಣದ ತೆರಿಗೆ ಪಾವತಿಸಿರುವ ಆರೋಪದ ಮೇರೆಗೆ ಕಳೆದ ತಿಂಗಳು ಜಿಎಸ್‌ಟಿ ಪ್ರಾಧಿಕಾರಗಳು ನೋಟಿಸ್ ನೀಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.