ADVERTISEMENT

ಇಂದಿನಿಂದ ಹಣ ವರ್ಗಾವಣೆ ಅಗ್ಗ

ಪಿಟಿಐ
Published 30 ಜೂನ್ 2019, 20:00 IST
Last Updated 30 ಜೂನ್ 2019, 20:00 IST
   

ಮುಂಬೈ: ಬ್ಯಾಂಕ್‌ ಖಾತೆಗಳ ಮೂಲಕ ಹಣ ವರ್ಗಾಯಿಸುವ ಜನಪ್ರಿಯ ವಿಧಾನಗಳಾದ ‘ಆರ್‌ಟಿಜಿಎಸ್‌’ ಮತ್ತು ‘ಎನ್‌ಇಎಫ್‌ಟಿ’ ಸೇವೆ ಸೋಮವಾರದಿಂದ ಅಗ್ಗವಾಗಲಿವೆ.

ಈ ಸೇವೆಗಳ ಮೇಲೆ ಯಾವುದೇ ಶುಲ್ಕ ವಿಧಿಸದಿರಲು ಭಾರತೀಯ ರಿಸರ್ವ್‌ ಬ್ಯಾಂಕ್ ಈ ಮೊದಲೇ ಪ್ರಕಟಿಸಿತ್ತು. ಶುಲ್ಕ ಕಡಿತದ ಪ್ರಯೋಜನವನ್ನು ಬ್ಯಾಂಕ್‌ಗಳು ಜುಲೈ 1ರಿಂದಲೇ ಗ್ರಾಹಕರಿಗೆ ವರ್ಗಾಯಿಸಬೇಕು ಎಂದೂ ಸೂಚಿಸಿತ್ತು. ಡಿಜಿಟಲ್‌ ವಹಿವಾಟು ಉತ್ತೇಜಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.

ಬ್ಯಾಂಕ್‌ ಗ್ರಾಹಕರು₹ 2 ಲಕ್ಷದವರೆಗಿನ ನಗದು ವರ್ಗಾವಣೆಗೆ ‘ಎನ್‌ಇಎಫ್‌ಟಿ’ ಮತ್ತು ₹ 2 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ವರ್ಗಾವಣೆಗೆ ‘ಆರ್‌ಟಿಜಿಎಸ್‌’ ಬಳಸುತ್ತಿದ್ದಾರೆ. ಬ್ಯಾಂಕ್‌ಗಳು ‘ಎನ್‌ಇಎಫ್‌ಟಿ’ಗೆ ₹ 1ರಿಂದ ₹ 5ಮತ್ತು ‘ಆರ್‌ಟಿಜಿಎಸ್‌’ಗೆ ₹ 5 ರಿಂದ ₹ 50ರವರೆಗೆ ಶುಲ್ಕ ವಿಧಿಸುತ್ತಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.