ADVERTISEMENT

ಕಚ್ಚಾ ತೈಲ ಉತ್ಪಾದನೆ ತಗ್ಗಿಸಲು ಒಪೆಕ್‌+ ಒಪ್ಪಿಗೆ

ಏಜೆನ್ಸೀಸ್
Published 5 ಸೆಪ್ಟೆಂಬರ್ 2022, 17:36 IST
Last Updated 5 ಸೆಪ್ಟೆಂಬರ್ 2022, 17:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ವಿಯೆನ್ನಾ: ಪೆಟ್ರೋಲಿಯಂ ರಫ್ತುದಾರ ರಾಷ್ಟ್ರಗಳ ಒಕ್ಕೂಟ (ಒಪೆಕ್) ಮತ್ತು ಆ ಒಕ್ಕೂಟದ ಮಿತ್ರರಾಷ್ಟ್ರಗಳ (ಒಪೆಕ್‌+) ಪ್ರತಿನಿಧಿಗಳುಒಂದು ವರ್ಷಕ್ಕೂ ಅಧಿಕ ಸಮಯದ ಬಳಿಕ ಕಚ್ಚಾ ತೈಲ ಉತ್ಪಾದನೆಯನ್ನು ತುಸು ಕಡಿತಗೊಳಿಸಲು ಸೋಮವಾರ ಒಪ್ಪಿಗೆ ನೀಡಿವೆ.

ಜಾಗತಿಕ ಆರ್ಥಿಕ ಹಿಂಜರಿತದ ಆತಂಕದಿಂದಾಗಿ ಕಚ್ಚಾ ತೈಲ ದರ ಇಳಿಕೆ ಆಗುತ್ತಿದೆ. ಹೀಗಾಗಿ ಉತ್ಪಾದನೆ ಕಡಿಮೆ ಮಾಡುವ ಮೂಲಕ ಬೆಲೆ ಹೆಚ್ಚಾಗುವಂತೆ ಮಾಡಲು ಈ ನಿರ್ಧಾರಕ್ಕೆ ಬಂದಿವೆ. ಅಕ್ಟೋಬರ್‌ನಲ್ಲಿ ದಿನಕ್ಕೆ ಒಂದು ಲಕ್ಷ ಬ್ಯಾರಲ್‌ನಷ್ಟು ಕಡಿಮೆ ಉತ್ಪಾದನೆ ಮಾಡಲಿವೆ.

ಕಚ್ಚಾ ತೈಲ ದರ ಏರಿಕೆಯಿಂದಅಮೆರಿಕದಲ್ಲಿ ಹಣದುಬ್ಬರವು ದಶಕಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಆಗಿದೆ. ಹೀಗಾಗಿ ಉತ್ಪಾದನೆ ಹೆಚ್ಚಿಸುವಂತೆ ಅಮೆರಿಕವು ಒತ್ತಾಯಿಸುತ್ತಲೇ ಇತ್ತು. ಆದರೆ, ಒಪೆಕ್‌+ ದೇಶ
ಗಳು ಸೋಮವಾರ ತೆಗೆದು
ಕೊಂಡಿರುವ ನಿರ್ಧಾರದಿಂದ ಅಮೆರಿಕಕ್ಕೆ ನಿರಾಸೆ ಆಗಲಿದೆ.

ADVERTISEMENT

ಈಗಿನ ಜಾಗತಿಕ ಪರಿಸ್ಥಿತಿಯಲ್ಲಿ ಉತ್ಪಾದನೆ ಕಡಿತ ಮಾಡುವುದು ಸೂಕ್ತ ನಿರ್ಧಾರವಲ್ಲ ಎಂದು ತಜ್ಞರು ಹೇಳಿದ್ದಾರೆ.

ತೈಲ ದರ ಏರಿಕೆ: ಈ ನಿರ್ಧಾರದ ಬಳಿಕ ಕಚ್ಚಾ ತೈಲ ದರ ಏರಿಕೆ ಕಂಡಿದೆ. ಅಮೆರಿಕದ ಕಚ್ಚಾ ತೈಲ ದರ ಶೇ 3.3ರಷ್ಟು ಹೆಚ್ಚಾಗಿ ಬ್ಯಾರಲ್‌ಗೆ 89.79 ಡಾಲರ್‌ಗೆ ತಲುಪಿತು. ಬ್ರೆಂಟ್‌ ಕಚ್ಚಾ ತೈಲ ದರ ಶೇ 3.7ರಷ್ಟು ಹೆಚ್ಚಾಗಿ ಬ್ಯಾರಲ್‌ಗೆ 96.50ರಂತೆ ಮಾರಾಟವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.