ADVERTISEMENT

ತೈಲ ಬೇಡಿಕೆ: ಮುನ್ನೋಟ ಹೆಚ್ಚಿಸಿದ ಒಪೆಕ್

ರಾಯಿಟರ್ಸ್
Published 9 ಅಕ್ಟೋಬರ್ 2023, 16:45 IST
Last Updated 9 ಅಕ್ಟೋಬರ್ 2023, 16:45 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಲಂಡನ್‌: ಪೆಟ್ರೋಲಿಯಂ ಉತ್ಪನ್ನಗಳನ್ನು ರಫ್ತು ಮಾಡುವ ದೇಶಗಳ ಸಂಘಟನೆಯು (ಒಪೆಕ್‌) ಜಾಗತಿಕ ತೈಲ ಬೇಡಿಕೆಯ ಮುನ್ನೋಟವನ್ನು ಮಧ್ಯಮಾವಧಿ ಮತ್ತು ದೀರ್ಘಾವಧಿಗೆ ಹೆಚ್ಚಳ ಮಾಡಿದೆ. 

2023ರಲ್ಲಿ ತೈಲ ಬೇಡಿಕೆಯು ಪ್ರತಿ ದಿನಕ್ಕೆ 10.2 ಕೋಟಿ ಬ್ಯಾರಲ್‌ ಆಗಲಿದೆ. 2028ರ ವೇಳೆಗೆ 11.02 ಕೋಟಿ ಬ್ಯಾರಲ್‌ಗೆ ತಲುಪುವ ಅಂದಾಜು ಮಾಡಲಾಗಿದೆ ಎಂದು ಹೇಳಿದೆ.

ಜಾಗತಿಕ ತೈಲ ಬೇಡಿಕೆಯು 2045ರ ವೇಳೆಗೆ ಪ್ರತಿ ದಿನಕ್ಕೆ 11.6 ಕೋಟಿ ಬ್ಯಾರಲ್‌ಗೆ ತಲುಪಲಿದೆ ಎಂದು ಅದು ಹೇಳಿದೆ. ಕಳೆದ ವರ್ಷ ಮಾಡಿದ್ದ ಅಂದಾಜಿನಲ್ಲಿ ಪ್ರತಿ ದಿನಕ್ಕೆ 11 ಕೋಟಿ ಬ್ಯಾರಲ್‌ನಷ್ಟು ಬೇಡಿಕೆ ಬರಲಿದೆ ಎಂದು ಹೇಳಿತ್ತು. ಇದಕ್ಕೆ ಹೋಲಿಸಿದರೆ ಬೇಡಿಕೆಯು ದಿನಕ್ಕೆ 60 ಲಕ್ಷ ಬ್ಯಾರಲ್‌ನಷ್ಟು ಹೆಚ್ಚಾಗಲಿದೆ ಎಂದು ತಿಳಿಸಿದೆ.

ADVERTISEMENT

ಜಾಗತಿಕ ಬೇಡಿಕೆಯನ್ನು ಪೂರೈಸಲು ₹1,162 ಲಕ್ಷ ಕೋಟಿಯಷ್ಟು ಹೂಡಿಕೆಯ ಅಗತ್ಯ ಇದೆ ಎಂದೂ ಒಪೆಕ್ ತಿಳಿಸಿದೆ. ನವೀಕರಿಸಬಲ್ಲ ಇಂಧನ ಬಳಕೆ ಹೆಚ್ಚಾಗಿ, ವಿದ್ಯುತ್ ಚಾಲಿತ ಕಾರುಗಳು ಸಂಖ್ಯೆಯು ಏರಿಕೆ ಆದರೂ ಈ ಪ್ರಮಾಣದ ಹೂಡಿಕೆ ಬೇಕಾಗಲಿದೆ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.