ADVERTISEMENT

ಓಲಾ ಇ–ಸ್ಕೂಟರ್‌: 10 ಸಾವಿರ ಗ್ರಾಹಕರು ದೂರು

ಪಿಟಿಐ
Published 12 ಅಕ್ಟೋಬರ್ 2024, 13:47 IST
Last Updated 12 ಅಕ್ಟೋಬರ್ 2024, 13:47 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ (ಪಿಟಿಐ): ಕಳೆದ ಒಂದು ವರ್ಷದಲ್ಲಿ ಓಲಾ ಎಲೆಕ್ಟ್ರಿಕ್‌ ಕಂಪನಿಯ ಇ–ಸ್ಕೂಟರ್‌ನ ಗುಣಮಟ್ಟ ಮತ್ತು ಮಾರಾಟ ಸೇವೆಯಲ್ಲಿನ ಲೋಪಕ್ಕೆ ಸಂಬಂಧಿಸಿದಂತೆ 10 ಸಾವಿರಕ್ಕೂ ಹೆಚ್ಚು ಗ್ರಾಹಕರು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರಕ್ಕೆ (ಸಿಸಿಪಿಎ) ದೂರು ಸಲ್ಲಿಸಿದ್ದಾರೆ. ಹಾಗಾಗಿ, ಪ್ರಾಧಿಕಾರವು ಕಂಪನಿಗೆ ಷೋಕಾಸ್‌ ನೋಟಿಸ್‌ ನೀಡಿದೆ ಎಂದು ಮೂಲಗಳು ತಿಳಿಸಿವೆ. 

ರಾಷ್ಟ್ರೀಯ ಗ್ರಾಹಕರ ಸಹಾಯವಾಣಿಗೆ ಕಂಪನಿ ಸೇವೆಯಲ್ಲಿನ ಲೋಪದ ಬಗ್ಗೆ ದೂರುಗಳು ಸಲ್ಲಿಕೆಯಾಗಿವೆ. ಈ ಸಮಸ್ಯೆ ಬಗೆಹರಿಸಲು ಕಂಪನಿಯು ಅಲ್ಪಮಟ್ಟಿಗೆ ಆಸಕ್ತಿ ತೋರಿದೆ ಎಂದು ಹೇಳಿವೆ.

ಸಹಾಯವಾಣಿ ಮೂಲಕ ಗ್ರಾಹಕರು ನೀಡಿದ ದೂರುಗಳನ್ನು ಪ್ರಾಧಿಕಾರವು ಕೂಲಂಕಷವಾಗಿ ಪರಿಶೀಲನೆ ನಡೆಸಿದೆ. ಆ ಬಳಿಕ ನೋಟಿಸ್‌ ನೀಡಿದೆ ಎಂದು ತಿಳಿಸಿವೆ.

ADVERTISEMENT

ಕಂಪನಿಯು ಉಚಿತ ಸೇವೆಗೂ ಶುಲ್ಕ ವಿಧಿಸುತ್ತದೆ. ಸಕಾಲದಲ್ಲಿ ಸೇವೆ ಒದಗಿಸಲು ವಿಫಲವಾಗಿದೆ. ಅಸಮರ್ಪಕ ಸೇವೆ ನೀಡಲಾಗುತ್ತಿದೆ. ವಾರಂಟಿ ಸೇವೆ ಒದಗಿಸಲು ನಿರಾಕರಿಸಲಾಗುತ್ತದೆ. ಸೇವೆ ಬಳಿಕವೂ ಸ್ಕೂಟರ್‌ನಲ್ಲಿ ಮತ್ತೆ ದೋಷಗಳು ಕಾಣಿಸಿಕೊಳ್ಳುತ್ತಿವೆ. ಕಾರ್ಯಕ್ಷಮತೆ ಉತ್ತಮವಾಗಿಲ್ಲ. ತಪ್ಪಾದ ಇನ್‌ವಾಯ್ಸ್‌ ನೀಡಲಾಗುತ್ತಿದೆ ಎಂಬುದು ಸೇರಿ ಹಲವು ಸಮಸ್ಯೆಗಳ ಬಗ್ಗೆ ಗ್ರಾಹಕರು ದೂರು ಸಲ್ಲಿಸಿದ್ದಾರೆ ಎಂದು ವಿವರಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.