ನವದೆಹಲಿ: ಗ್ರಾಮೀಣ ಪ್ರದೇಶದ 15ರಿಂದ 25 ವಯೋಮಾನದ ಶೇ 82.1ರಷ್ಟು ಯುವಜನರು ಇಂಟರ್‌ನೆಟ್ ಸೇವೆ ಬಳಸುತ್ತಿದ್ದಾರೆ. ನಗರ ಪ್ರದೇಶದಲ್ಲಿ ಈ ವಯೋಮಾನದ ಬಳಕೆದಾರರ ಪ್ರಮಾಣ ಶೇ 91.8ರಷ್ಟಿದೆ ಎಂದು ಕೇಂದ್ರ ಸರ್ಕಾರ ಸಮೀಕ್ಷೆ ತಿಳಿಸಿದೆ.
ಗ್ರಾಮೀಣ ಪ್ರದೇಶದಲ್ಲಿ 15ರಿಂದ 24 ವರ್ಷದೊಳಗಿನ ಶೇ 95.7ರಷ್ಟು ಯುವಜನರು ಮೊಬೈಲ್ ಫೋನ್ ಬಳಕೆ ಮಾಡುತ್ತಿದ್ದಾರೆ. ನಗರ ಪ್ರದೇಶದಲ್ಲಿ ಈ ವಯೋಮಾನದ ಶೇ 97ರಷ್ಟು ಮಂದಿ ಮೊಬೈಲ್ ಬಳಸುತ್ತಿದ್ದಾರೆ ಎಂದು ಬುಧವಾರ ಬಿಡುಗಡೆಯಾಗಿರುವ ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ವರದಿ ತಿಳಿಸಿದೆ.
2022ರ ಜುಲೈನಿಂದ 2023ರ ಜೂನ್‌ವರೆಗೆ ಈ ವಾರ್ಷಿಕ ಸಮೀಕ್ಷೆ ನಡೆಸಲಾಗಿದೆ. ಇದು 79ನೇ ರಾಷ್ಟ್ರೀಯ ಮಾದರಿ ಸಮೀಕ್ಷೆಯ ಭಾಗವಾಗಿದೆ.
ದೇಶದಲ್ಲಿ ದೂರವಾಣಿ/ಮೊಬೈಲ್ ಫೋನ್ ಹೊಂದಿರುವ ಕುಟುಂಬಗಳ ಸಂಖ್ಯೆ ಶೇ 95.1ರಷ್ಟಿದೆ. ಕಂಪ್ಯೂಟರ್ ಹೊಂದಿರುವ ಕುಟುಂಬಗಳ ಶೇ 9.9ರಷ್ಟಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.