ADVERTISEMENT

ವಂಚನೆ ಆರೋಪ: ಓಯೊ ಹೋಟೆಲ್ಸ್‌ ಸಿಇಒ ರಿತೇಶ್‌ ಅಗರ್‌ವಾಲ್ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 7:49 IST
Last Updated 6 ಸೆಪ್ಟೆಂಬರ್ 2019, 7:49 IST
ರಿತೇಶ್‌ ಅಗರ್‌ವಾಲ್
ರಿತೇಶ್‌ ಅಗರ್‌ವಾಲ್   

ಬೆಂಗಳೂರು: ಓಯೊ ಹೋಟೆಲ್ಸ್‌ನ ಸಿಇಒ ಹಾಗೂ ಹೋಮ್ಸ್‌ ಸಂಸ್ಥಾಪಕ ರಿತೇಶ್‌ ಅಗರ್‌ವಾಲ್ ಸೇರಿದಂತೆ ಅವರ ಇಬ್ಬರು ಪ್ರತಿನಿಧಿಗಳವಿರುದ್ಧ ವೈಟ್‌ಫೀಲ್ಡ್‌ ಪೋಲಿಸರು ನಂಬಿಕೆ ದ್ರೋಹ (ಐಪಿಸಿ 406) ಹಾಗೂ ವಂಚನೆ (ಐಪಿಸಿ 420) ಆರೋಪದಡಿ ದೂರು ದಾಖಲಿಸಿದ್ದಾರೆ.

ಮಾಜಿ ಸೈನಿಕ ವಿಆರ್‌ಎಸ್‌ ನಟರಾಜನ್‌ ದೂರುದಾರರಾಗಿದ್ದು, ವೈಟ್‌ಫೀಲ್ಡ್‌ನ ಬಿಇಎಂಎಲ್‌ ಲೇಔಟ್‌ನಲ್ಲಿ ರಾಜ್‌ಗುರು ಶೆಟ್ಟರ್‌ ಹೋಟೆಲ್ಸ್‌ ನಡೆಸುತ್ತಿದ್ದಾರೆ.

2017ರ ಜೂನ್‌ನಲ್ಲಿ ನಟರಾಜನ್‌ ಅವರೊಂದಿಗೆ ಷೇರು ಒಪ್ಪಂದ ಮಾಡಿಕೊಂಡಿದ್ದ ಓಯೊ, ಬುಕ್ಕಿನಲ್ಲಿ ಬರುವ ಹಣದಶೇ 20 ರಷ್ಟು ತಾವು ಉಳಿಸಿಕೊಂಡು ಉಳಿದ ಶೇ. 80 ರಷ್ಟು ಹಣವನ್ನು ಪಾವತಿಸುವುದಾಗಿ ತಿಳಿಸಿತ್ತು. ಆದರೆ, ರಿತೇಶ್‌ ಅಗರ್‌ವಾಲ್ ಹಾಗೂ ಅವರ ಪ್ರತಿನಿಧಿಗಳಾದ ಆನಂದ್‌ ರೆಡ್ಡಿ, ಪ್ರತೀಕ್‌ ಸಿಂಗ್‌ ಶೇ. 80 ರಷ್ಟು ಹಣವನ್ನು ಪಡೆದಿದ್ದು, ತಮಗೆ ಕೇವಲ ಶೇ. 20 ರಷ್ಟು ಹಣವನ್ನು ನೀಡಿದ್ದಾರೆ. ಇದರಿಂದ ನನಗೆ ₹1 ಕೋಟಿ ನಷ್ಟವಾಗಿದೆ ಎಂದು ನಟರಾಜನ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಬೆಂಗಳೂರಿನ ಬಹುತೇಕ ಹೋಟೆಲ್‌ಗಳಲ್ಲಿ ಇದೇ ರೀತಿಯ ಸಮಸ್ಯೆ ಇದೆ ಎಂದು ನಟರಾಜನ್‌ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.