ADVERTISEMENT

ಏಷ್ಯಾದಲ್ಲೇ ಕಳಪೆ ಕರೆನ್ಸಿ ಎಂಬ ಅಪಖ್ಯಾತಿಗೆ ಪಾತ್ರವಾದ ಪಾಕಿಸ್ತಾನದ ರೂಪಾಯಿ

ಪಿಟಿಐ
Published 15 ಸೆಪ್ಟೆಂಬರ್ 2021, 12:10 IST
Last Updated 15 ಸೆಪ್ಟೆಂಬರ್ 2021, 12:10 IST
ಎಎಫ್‌ಪಿ ಸಂಗ್ರಹ ಚಿತ್ರ
ಎಎಫ್‌ಪಿ ಸಂಗ್ರಹ ಚಿತ್ರ   

ಕರಾಚಿ: ಅಮೆರಿಕದ ಡಾಲರ್ ಎದುರು ಪಾಕಿಸ್ತಾನದ ರೂಪಾಯಿ ಮೌಲ್ಯ ಇಂದು ₹ 1 ಗಿಂತಲೂ ಹೆಚ್ಚು ಕುಸಿದಿದ್ದು, ಬುಧವಾರದ ಅಂತರ ಬ್ಯಾಂಕ್ ವಹಿವಾಟಿನಲ್ಲಿ ₹ 169.9 ರಷ್ಟಾಗಿದೆ.

ಇದು ಪಾಕಿಸ್ತಾನದ ರೂಪಾಯಿ ಮೌಲ್ಯದ ಸಾರ್ವಕಾಲಿಕ ದಾಖಲೆಯ ಕುಸಿತ ಎನ್ನಲಾಗಿದೆ.

ಬುಧವಾರ ಬೆಳಗ್ಗೆಯಿಂದ ಅಮೆರಿಕದ ಡಾಲರ್‌ಗೆ ಬೇಡಿಕೆ ಹೆಚ್ಚಾಗಿದೆ ಎಂದು ಕರೆನ್ಸಿ ಡೀಲರ್‌ಗಳು ಹೇಳಿದ್ದಾರೆ. ಮಂಗಳವಾರ, ಡಾಲರ್ ಎದುರು ಪಾಕಿಸ್ತಾನದ ರೂಪಾಯಿ ಮೌಲ್ಯ ₹ 168.94 ಆಗಿತ್ತು.

ADVERTISEMENT

ಅಂತರ ಬ್ಯಾಂಕ್ ಮತ್ತು ಮುಕ್ತ ಮಾರುಕಟ್ಟೆಯಲ್ಲಿ ಆಮದುದಾರರು ಡಾಲರ್‌ಗಳನ್ನು ಮುಂಚಿತವಾಗಿ ಕಾಯ್ದಿರಿಸುತ್ತಿರುವುದರಿಂದ ಅದರ ಬೇಡಿಕೆಯಲ್ಲಿ ಹೆಚ್ಚಳವಾಗಿದೆ ಎಂದು ಪಾಕಿಸ್ತಾನದ ಎಕ್ಸ್‌ಚೇಂಜ್ ಕಂಪನಿಗಳ ಅಸೋಸಿಯೇಶನ್‌ನ ಅಧ್ಯಕ್ಷ ಮಲಿಕ್ ಬೋಸ್ತಾನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪಾಕಿಸ್ತಾನದ ಸ್ಟೇಟ್ ಬ್ಯಾಂಕ್ ಇದುವರೆಗೆ ಸ್ಥಳೀಯ ಕರೆನ್ಸಿಯ ಮೌಲ್ಯ ಸ್ಥಿರಗೊಳಿಸುವ ನಿಟ್ಟಿನಲ್ಲಿ ಮಧ್ಯಪ್ರವೇಶಿಸಿಲ್ಲ. ಇದನ್ನು ನಿಯಂತ್ರಿಸದಿದ್ದರೆ ಅಮೆರಿಕ ಡಾಲರ್ ತನ್ನ ಏರಿಕೆಯನ್ನು ಮುಂದುವರಿಸುತ್ತದೆ ಮತ್ತು ಸ್ಥಳೀಯ ಕರೆನ್ಸಿಯ ಮೌಲ್ಯ ಮತ್ತಷ್ಟು ಕುಸಿಯುತ್ತದೆ ಎಂದು ಬೋಸ್ತಾನ್ ಎಚ್ಚರಿಸಿದ್ದಾರೆ.

ಈ ಮೂಲಕ ಏಷ್ಯಾದ ಇತರ ಕರೆನ್ಸಿಗಳಿಗಿಂತ ಮೌಲ್ಯದಲ್ಲಿ ಹಿಂದೆ ಬಿದ್ದಿರುವ ಪಾಕಿಸ್ತಾನದ ರೂಪಾಯಿ, ಸದ್ಯ, ಸದ್ಯ, ಅತ್ಯಂತ ಕಳಪೆ ವಹಿವಾಟಿನ ಕರೆನ್ಸಿ ಎಂದು ಘೋಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.