ಕರಾಚಿ: ಭಾರತದಿಂದ ಹತ್ತಿಯನ್ನು ಆಮದು ಮಾಡಿಕೊಳ್ಳುವ ಪ್ರಸ್ತಾವ ತಿರಸ್ಕರಿಸಿದ ಇಮ್ರಾನ್ ಖಾನ್ ನೇತೃತ್ವದ ಸರ್ಕಾರದ ಕ್ರಮಕ್ಕೆ ಪಾಕಿಸ್ತಾನದ ಜವಳಿ ಉದ್ಯಮವು ಅಸಮಾಧಾನ ವ್ಯಕ್ತಪಡಿಸಿದೆ.
ಭಾರತದಿಂದ ಹತ್ತಿ ಆಮದು ಮಾಡಿಕೊಳ್ಳಬೇಕು ಎಂದು ಉನ್ನತಾಧಿಕಾರ ಸಮಿತಿಯೊಂದು ಮಾಡಿದ್ದ ಪ್ರಸ್ತಾವವನ್ನು ಪಾಕಿಸ್ತಾನದ ಸಚಿವ ಸಂಪುಟವು ಗುರುವಾರ ತಿರಸ್ಕರಿಸಿದೆ. ಈ ತೀರ್ಮಾನವು ಜವಳಿ ಉದ್ಯಮದ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.
ಭಾರತದಿಂದ ಹತ್ತಿ ಮತ್ತು ಹತ್ತಿ ನೂಲು ಆಮದು ಮಾಡಿಕೊಳ್ಳಬೇಕು ಎಂಬ ಪ್ರಸ್ತಾವವನ್ನು ಸರ್ಕಾರವು ಗಂಭೀರವಾಗಿ ಪರಿಶೀಲಿಸಬೇಕು ಎಂದು ಪಾಕಿಸ್ತಾನದ ಸಿದ್ಧಉಡುಪುಗಳ ವೇದಿಕೆ ಅಧ್ಯಕ್ಷ ಜಾವೆದ್ ಬಿಲ್ವಾನಿ ಒತ್ತಾಯಿಸಿರುವುದಾಗಿ ಡಾನ್ ಪತ್ರಿಕೆಯ ವರದಿ ಹೇಳಿದೆ. ‘ಭಾರತದಿಂದ ಹತ್ತಿ ನೂಲು ಆಮದು ಮಾಡಿಕೊಳ್ಳಬಾರದು ಎಂದಾದರೆ ಪಾಕಿಸ್ತಾನದಲ್ಲಿ ಅದು ಸಿಗುವಂತೆ ಮಾಡುವುದು ಸರ್ಕಾರದ ಹೊಣೆ’ ಎಂದೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.