ನವದೆಹಲಿ: ಪ್ಯಾನ್ ಅನ್ನು ಆಧಾರ್ ಜೊತೆ ಸಂಪರ್ಕಿಸದೇ ಇದ್ದರೆಅಂತಹ ಪ್ಯಾನ್‌ಗಳು 2023ರ ಮಾರ್ಚ್ ನಂತರ ನಿಷ್ಕ್ರಿಯ ಆಗಲಿವೆ ಎಂದು ಆದಾಯ ತೆರಿಗೆ ಇಲಾಖೆಯು ಶನಿವಾರ ಹೇಳಿದೆ.
ತಡ ಮಾಡಬೇಡಿ. ಇಂದೇ ಪ್ಯಾನ್ ಅನ್ನು ಆಧಾರ್ ಜೊತೆ ಸಂಪರ್ಕಿಸಿ ಎಂದು ಇಲಾಖೆಯು ಸಾರ್ವಜನಿಕಪ್ರಕಟಣೆಯಲ್ಲಿ ತಿಳಿಸಿದೆ.
ಆದಾಯ ತೆರಿಗೆ ಕಾಯ್ದೆ 1961ರ ಪ್ರಕಾರ, 2023ರ ಮಾರ್ಚ್ 31ರ ಒಳಗಾಗಿ ಆಧಾರ್ ಜೊತೆ ಪ್ಯಾನ್ ಜೋಡಣೆ ಮಾಡುವುದು ಕಡ್ಡಾಯ. ಹಾಗೆ ಮಾಡದೇ ಇದ್ದರೆ 2023ರ ಏಪ್ರಿಲ್ 1 ರಿಂದ ಪ್ಯಾನ್ ನಿಷ್ಕ್ರಿಯ ಆಗಲಿದೆ. ಗಡುವಿನ ಒಳಗಾಗಿ ಪ್ಯಾನ್–ಆಧಾರ್ ಜೋಡಣೆ ಮಾಡದೆ ಇದ್ದರೆ ಪ್ಯಾನ್ ನಿಷ್ಕ್ರಿಯ ಆಗುತ್ತದೆ. ಅದರಿಂದಾಗಿ ಆದಾಯ ವಿವರ ಸಲ್ಲಿಸಲು, ತೆರಿಗೆ ರೀಫಂಡ್ ಪಡೆಯಲು ಆಗುವುದಿಲ್ಲ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಈಗಾಗಲೇ ಎಚ್ಚರಿಕೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.