ADVERTISEMENT

ಕಂತುಗಳಲ್ಲಿ ವಿಮೆ ಪರಿಹಾರ ಪ್ರಸ್ತಾವಅಧ್ಯಯನಕ್ಕೆ ಸಮಿತಿ

ಪಿಟಿಐ
Published 13 ಅಕ್ಟೋಬರ್ 2018, 17:35 IST
Last Updated 13 ಅಕ್ಟೋಬರ್ 2018, 17:35 IST

ನವದೆಹಲಿ: ಅಪಘಾತ ಮತ್ತು ಆರೋಗ್ಯ ವಿಮೆ ಯೋಜನೆಗಳ ಪರಿಹಾರದ ಮೊತ್ತವನ್ನು ಕಂತುಗಳಲ್ಲಿ ವಿತರಿಸುವ ಪ್ರಸ್ತಾವ ಪರಿಶೀಲಿಸಲು ಸಮಿತಿಯೊಂದನ್ನು ರಚಿಸಲಾಗಿದೆ.

ವೈಯಕ್ತಿಕ ಅಪಘಾತ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ವಿಮೆ ಯೋಜನೆಗಳ ಪರಿಹಾರದ ಮೊತ್ತವನ್ನು ಒಂದೇ ಬಾರಿಗೆ ವಿತರಿಸುವ ಬದಲಿಗೆ ಕಂತುಗಳಲ್ಲಿ ಪಾವತಿಸುವ ಬಗ್ಗೆ ಕೆಲವು ಸಾಮಾನ್ಯ ಹಾಗೂ ಆರೋಗ್ಯ ವಿಮೆ ಸಂಸ್ಥೆಗಳು ಸಲಹೆ ಮುಂದಿಟ್ಟಿವೆ.

ಮೊದಲೇ ನಿಗದಿಪಡಿಸಿದ ಕಂತುಗಳಲ್ಲಿ ಪರಿಹಾರ ವಿತರಿಸುವ ಸಲಹೆಯನ್ನು ಪರಿಶೀಲಿಸಿ ವರದಿ ನೀಡಲು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ತಜ್ಞರ ಸಮಿತಿ ರಚಿಸಿದೆ.

ADVERTISEMENT

ಈ ಪ್ರಸ್ತಾವದ ಪ್ರಯೋಜನಗಳು ಏನು, ಇದನ್ನು ಪರಿಗಣನೆಗೆ ತೆಗೆದುಕೊಂಡರೆ ವಿಮೆ ಪಾಲಿಸಿದಾರರ ಹಿತಾಸಕ್ತಿ ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳೇನು ಮತ್ತಿತರ ಸಂಗತಿಗಳನ್ನು ಈ ಸಮಿತಿ ಪರಿಶೀಲಿಸಿ ಶಿಫಾರಸು ನೀಡಲಿದೆ.

ಎಂಟು ವಾರಗಳಲ್ಲಿ ವರದಿ ಸಲ್ಲಿಕೆಯಾಗುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.