ಮುಂಬೈ: ಏರ್ ಮಾರಿಷಸ್ ವಿಮಾನದಲ್ಲಿ ಉಂಟಾದ ಎಂಜಿನ್ ದೋಷದಿಂದಾಗಿ 200 ಪ್ರಯಾಣಿಕರು 5 ಗಂಟೆ ವಿಮಾನದಲ್ಲಿಯೇ ಸಿಲುಕಿಕೊಂಡ ಘಟನೆ ಮುಂಬೈ ವಿಮಾನ ನಿಲ್ದಾಣದಲ್ಲಿ ಶನಿವಾರ ನಡೆದಿದೆ.
200 ಪ್ರಯಾಣಿಕರಿದ್ದ ಏರ್ ಮಾರಿಷಸ್ ವಿಮಾನ ಎಂಕೆ 749 ಮುಂಬೈನಿಂದ ಮಾರಿಷಸ್‌ಗೆ ಮುಂಜಾನೆ 4.30ಕ್ಕೆ ಹೊರಡಬೇಕಿತ್ತು. ಆದರೆ ಎಂಜಿನ್‌ನಲ್ಲಿ ಉಂಟಾದ ದೋಷದಿಂದಾಗಿ ಪ್ರಯಾಣಿಕರು ವಿಮಾನದಲ್ಲಿಯೇ ಉಳಿಯುವಂತಾಯಿತು.
ಈ ವೇಳೆ ವಿಮಾನದ ಹವಾನಿಯಂತ್ರಣ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ 78 ವರ್ಷದ ವ್ಯಕ್ತಿಯೊಬ್ಬರು ಉಸಿರಾಟದ ಸಮಸ್ಯೆಯನ್ನು ಅನುಭವಿಸುವಂತಾಯಿತು. ಪ್ರಯಾಣಿಕರು ಹೊರಗೆ ಹೋಗಲು ಸಿಬ್ಬಂದಿ ಅನುಮತಿಸಲಿಲ್ಲ. ವಿಮಾನದ ಎಂಜಿನ್ ದೋಷ ಸರಿಪಡಿಸಲಾಗದ ಕಾರಣ, ವಿಮಾನಯಾನ ಸಂಸ್ಥೆ ಬೆಳಿಗ್ಗೆ 10 ಗಂಟೆಗೆ ವಿಮಾನ ಯಾನವನ್ನು ರದ್ದುಗೊಳಿಸಿತು ಎಂದು ಪ್ರಯಾಣಿಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.