ADVERTISEMENT

ಚಿಪ್‌ ಪೂರೈಕೆಯಲ್ಲಿ ಸುಧಾರಣೆ: ಪ್ರಯಾಣಿಕ ವಾಹನ ಸಗಟು ಮಾರಾಟ ಹೆಚ್ಚಳ

ಪಿಟಿಐ
Published 9 ಸೆಪ್ಟೆಂಬರ್ 2022, 13:06 IST
Last Updated 9 ಸೆಪ್ಟೆಂಬರ್ 2022, 13:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪ್ರಯಾಣಿಕ ವಾಹನಗಳ ಸಗಟು ಮಾರಾಟವು 2021ರ ಆಗಸ್ಟ್‌ಗೆ ಹೋಲಿಸಿದರೆ 2022ರ ಆಗಸ್ಟ್‌ನಲ್ಲಿ ಶೇಕಡ 21ರಷ್ಟು ಏರಿಕೆ ಆಗಿದೆ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟ (ಎಸ್‌ಐಎಎಂ) ಶುಕ್ರವಾರ ತಿಳಿಸಿದೆ.

ಸೆಮಿಕಂಡಕ್ಟರ್‌ ಚಿಪ್‌ ಪೂರೈಕೆಯಲ್ಲಿ ಸುಧಾರಣೆ ಮತ್ತು ಹಬ್ಬದ ಬೇಡಿಕೆಯ ಕಾರಣಗಳಿಂದಾಗಿ ಪ್ರಯಾಣಿಕ ವಾಹನಗಳ ಸಗಟು ಮಾರಾಟವು 2.32 ಲಕ್ಷದಿಂದ 2.81 ಲಕ್ಷಕ್ಕೆ ಏರಿಕೆ ಆಗಿದೆ ಎಂದು ಅದು ಹೇಳಿದೆ.

ಎಲ್ಲಾ ವಿಭಾಗಗಳ ಒಟ್ಟು ಮಾರಾಟವು ಕಳೆದ ಆಗಸ್ಟ್‌ಗೆ ಹೋಲಿಸಿದರೆ ಶೇ 18ರಷ್ಟು ಹೆಚ್ಚಾಗಿದ್ದು, 18.77 ಲಕ್ಷಕ್ಕೆ ತಲುಪಿದೆ ಎಂದು ಅದು ಹೇಳಿದೆ.

ADVERTISEMENT

‘ಉತ್ತಮ ಮುಂಗಾರು ಮತ್ತು ಹಬ್ಬಗಳ ಋತುವಿನಿಂದಾಗಿ ವಾಹನಗಳ ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಮಾಡಲಾಗಿದೆ. ಹೀಗಾಗಿ ಪೂರೈಕೆ ವ್ಯವಸ್ಥೆಯಲ್ಲಿ ಇರುವ ಸವಾಲುಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ’ ಎಂದು ಒಕ್ಕೂಟದ ಪ್ರಧಾನ ನಿರ್ದೇಶಕ ರಾಜೇಶ್‌ ಮೆನನ್‌ ತಿಳಿಸಿದ್ದಾರೆ.

‘ಸಿಎನ್‌ಜಿ ದರವು ಗರಿಷ್ಠ ಮಟ್ಟದಲ್ಲಿ ಇರುವುದು ಉದ್ಯಮಕ್ಕೆ ದೊಡ್ಡ ಸವಾಲಾಗಿದೆ. ಕೇಂದ್ರ ಸರ್ಕಾರದ ಮಧ್ಯಪ್ರವೇಶ ಮತ್ತು ಬೆಂಬಲದ ನಿರೀಕ್ಷೆಯಲ್ಲಿ ಇದ್ದೇವೆ’ ಎಂದು ಅವರು ಹೇಳಿದ್ದಾರೆ.

ಮಾರಾಟದ ವಿವರ
ವಾಹನ;
2021 ಆಗಸ್ಟ್‌; 2022 ಆಗಸ್ಟ್; ಏರಿಕೆ
ಪ್ರಯಾಣಿಕ ವಾಹನ; 2,32,224; 2,81,210; 21%
ಪ್ರಯಾಣಿಕ ಕಾರು; 1,08,508; 1,33,477; 23%
ಯುಟಿಲಿಟಿ ವಾಹನ; 1,12,863; 1,35,497; 20%
ದ್ವಿಚಕ್ರ; 13,38,740; 15,57,429; 16%
ತ್ರಿಚಕ್ರ; 23,606, 38,369; 63%

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.