ನವದೆಹಲಿ: ಪ್ರಯಾಣಿಕ ವಾಹನಗಳ ರಿಟೇಲ್ ಮಾರಾಟವು 2020ರ ಡಿಸೆಂಬರ್‌ಗೆ ಹೋಲಿಸಿದರೆ 2021ರ ಡಿಸೆಂಬರ್‌ನಲ್ಲಿ ಶೇಕಡ 11ರಷ್ಟು ಇಳಿಕೆ ಆಗಿದೆ ಎಂದು ಭಾರತೀಯ ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಬುಧವಾರ ತಿಳಿಸಿದೆ.
2020ರ ಡಿಸೆಂಬರ್‌ನಲ್ಲಿ 2.74 ಲಕ್ಷ ಪ್ರಯಾಣಿಕ ವಾಹನಗಳ ರಿಟೇಲ್ ಮಾರಾಟ ಆಗಿತ್ತು. 2021ರ ಡಿಸೆಂಬರ್‌ನಲ್ಲಿ ಮಾರಾಟವು 2.44 ಲಕ್ಷಕ್ಕೆ ಇಳಿಕೆ ಆಗಿದೆ.
ವರ್ಷಾಂತ್ಯದ ಕಾರಣಕ್ಕಾಗಿ ಕಂಪನಿಗಳು ತಮ್ಮ ಬಳಿ ಇರುವ ದಾಸ್ತಾನು ಖಾಲಿ ಮಾಡಿಕೊಳ್ಳಲು ವಿಶೇಷ ರಿಯಾಯಿತಿ ನೀಡುತ್ತವೆ. ಹೀಗಾಗಿ ಡಿಸೆಂಬರ್‌ನಲ್ಲಿ ಮಾರಾಟವುಸಾಮಾನ್ಯವಾಗಿ ಗರಿಷ್ಠ ಮಟ್ಟದಲ್ಲಿ ಇರುತ್ತದೆ. ಆದರೆ, ಈ ವರ್ಷ ಹಾಗಾಗಲಿಲ್ಲ. ರಿಟೇಲ್ ಮಾರಾಟವು ನಿರಾಶಾದಾಯಕವಾಗಿದೆ ಎಂದು ಎಫ್‌ಎಡಿಎ ಅಧ್ಯಕ್ಷ ವಿಂಕೇಶ್ ಗುಲಾಟಿ ಹೇಳಿದ್ದಾರೆ.
ಡಿಸೆಂಬರ್‌ನಲ್ಲಿ ಪ್ರಯಾಣಿಕ ವಾಹನಗಳಿಗೆ ಹೆಚ್ಚಿನ ಬುಕಿಂಗ್ ಆಗಿದ್ದರೂಸೆಮಿಕಂಡಕ್ಟರ್ ಕೊರತೆಯಿಂದಾಗಿ ಮಾರಾಟವು ಕುಸಿತ ಕಾಣುವಂತಾಯಿತು ಎಂದು ಅವರು ತಿಳಿಸಿದ್ದಾರೆ. ದ್ವಿಚಕ್ರ ವಾಹನ ಮಾರಾಟವು 2020ರ ಡಿಸೆಂಬರ್‌ಗೆ ಹೋಲಿಸಿದರೆ ಈ ಬಾರಿ ಶೇ 19.86ರಷ್ಟು ಇಳಿಕೆ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.