ADVERTISEMENT

ಸೆಪ್ಟೆಂಬರ್‌ನಲ್ಲಿ ಪ್ರಯಾಣಿಕ ವಾಹನ ರಿಟೇಲ್‌ ಮಾರಾಟ ಹೆಚ್ಚಳ: ಎಫ್‌ಎಡಿಎ

ಪಿಟಿಐ
Published 8 ಅಕ್ಟೋಬರ್ 2020, 16:30 IST
Last Updated 8 ಅಕ್ಟೋಬರ್ 2020, 16:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪ್ರಯಾಣಿಕ ವಾಹನಗಳ ರಿಟೇಲ್‌ ಮಾರಾಟವು ಸೆಪ್ಟೆಂಬರ್‌ನಲ್ಲಿ ಶೇಕಡ 9.81ರಷ್ಟು ಹೆಚ್ಚಾಗಿದೆ ಎಂದು ಆಟೊಮೊಬೈಲ್‌ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ತಿಳಿಸಿದೆ.

2019ರ ಸೆಪ್ಟೆಂಬರ್‌ನಲ್ಲಿ 1.78 ಲಕ್ಷ ವಾಹನಗಳು ಮಾರಾಟವಾಗಿದ್ದವು. 2020ರ ಸೆಪ್ಟೆಂಬರ್‌ನಲ್ಲಿ 1.95 ಲಕ್ಷ ವಾಹನಗಳು ಮಾರಾಟವಾಗಿವೆ.

ದ್ವಿಚಕ್ರ ವಾಹನಗಳ ಮಾರಾಟವು ಶೇ 12.6ರಷ್ಟು ಇಳಿಕೆಯಾಗಿದ್ದು, 11.63 ಲಕ್ಷದಿಂದ 10.16 ಲಕ್ಷಕ್ಕೆ ಇಳಿದಿದೆ. ವಾಣಿಜ್ಯ ವಾಹನಗಳ ಮಾರಾಟ ಶೇ 33.65ರಷ್ಟು, ತ್ರಿಚಕ್ರ ವಾಹನಗಳ ಮಾರಾಟ ಶೇ 58.86ರಷ್ಟು ಇಳಿಕೆಯಾಗಿದೆ. ಒಟ್ಟಾರೆ ಎಲ್ಲಾ ಮಾದರಿಗಳ ವಾಹನ ಮಾರಾಟ ಶೇ 10ರಷ್ಟು ಕಡಿಮೆಯಾಗಿದೆ.

ADVERTISEMENT

ಟ್ರ್ಯಾಕ್ಟರ್‌ ಮಾರಾಟ ಶೇ 80ರಷ್ಟು ಹೆಚ್ಚಾಗಿದೆ. ‘ಪರಸ್ಪರ ಅಂತರ ಕಾಯ್ದುಕೊಳ್ಳಬೇಕಿರುವುದು ಹಾಗೂ ಬ್ಯಾಂಕ್‌ಗಳು ವಾಹನಗಳ ಖರೀದಿಗೆ ಸಾಲ ನೀಡಲು ಮುಂದಾಗಿರುವುದರಿಂದ ಎಂಟ್ರಿ ಲೆವೆಲ್‌ನ ಪ್ರಯಾಣಿಕ ವಾಹನಗಳಿಗೆ ಬೇಡಿಕೆ ಬರುತ್ತಿದೆ’ ಎಂದು ಒಕ್ಕೂಟದ ಅಧ್ಯಕ್ಷ ವೆಂಕಟೇಶ್‌ ಗುಲಾಟಿ ತಿಳಿಸಿದ್ದಾರೆ.

ಹಂತ ಹಂತವಾಗಿ ಲಾಕ್‌ಡೌನ್‌ ತೆರವಾಗುತ್ತಿರುವುದರಿಂದ ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿ ವಾಹನ ಮಾರಾಟದಲ್ಲಿ ಏರಿಕೆ ಕಂಡುಬರುವ ನಿರೀಕ್ಷೆ ಇದೆ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.