ADVERTISEMENT

₹ 30 ಸಾವಿರ ಕೋಟಿ ವಹಿವಾಟು ನಡೆಸಿದ ‘ಪತಂಜಲಿ’

ಪಿಟಿಐ
Published 13 ಜುಲೈ 2021, 16:52 IST
Last Updated 13 ಜುಲೈ 2021, 16:52 IST
   

ನವದೆಹಲಿ: ರುಚಿ ಸೋಯಾ ಕಂಪನಿಯನ್ನು ಸ್ವಾಧೀನಪಡಿಸಿಕೊಂಡ ಬಳಿಕ ಪತಂಜಲಿ ಸಮೂಹದ ವಹಿವಾಟು ಮೊತ್ತವು 2020–21ನೆಯ ಹಣಕಾಸು ವರ್ಷದಲ್ಲಿ ₹ 30 ಸಾವಿರ ಕೋಟಿ ತಲುಪಿದೆ ಎಂದು ಬಾಬಾ ರಾಮ್‌ದೇವ್‌ ಮಂಗಳವಾರ ತಿಳಿಸಿದ್ದಾರೆ.

ಪತಂಜಲಿ ಸಮೂಹವು ದಿವಾಳಿ ಪ್ರಕ್ರಿಯೆಯ ಮೂಲಕ ರುಚಿ ಸೋಯಾ ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಸಮೂಹದ ಒಟ್ಟಾರೆ ವಹಿವಾಟು ಮೊತ್ತಕ್ಕೆ ಅರ್ಧಕ್ಕಿಂತಲೂ ಹೆಚ್ಚಿನ ಕೊಡುಗೆ ನೀಡಿದೆ.

ಪತಂಜಲಿ ಸಮೂಹದ ವಹಿವಾಟಿನಲ್ಲಿ ರುಚಿ ಸೋಯಾದ ಪಾಲು ₹ 16,318 ಕೋಟಿ ಎಂದು ರಾಮ್‌ದೇವ್‌ ಅವರು ವರ್ಚುವಲ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.