ADVERTISEMENT

10 ಲಕ್ಷ ವರ್ತಕರಿಗೆ ಡಿಜಿಟಲ್‌ ಸೌಲಭ್ಯ ಪೇಟಿಎಂ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 19:35 IST
Last Updated 24 ಜನವರಿ 2020, 19:35 IST
ಪೇಟಿಎಂ
ಪೇಟಿಎಂ    

ಬೆಂಗಳೂರು: ತನ್ನ ಡಿಜಿಟಲ್‌ ಸೇವೆಗಳ ಮೂಲಕ ಆರು ತಿಂಗಳಿನಲ್ಲಿ ರಾಜ್ಯದ 10 ಲಕ್ಷ ವ್ಯಾಪಾರಿಗಳನ್ನು ಡಿಜಿಟಲ್‌ ವಹಿವಾಟಿನ ವ್ಯಾಪ್ತಿಗೆ ತರುವುದಾಗಿ ಆನ್‌ಲೈನ್‌ ಪೇಮಂಟ್ಸ್‌ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಪೇಟಿಎಂ ತಿಳಿಸಿದೆ.

ಕಂಪನಿಯು ಈಚೆಗಷ್ಟೇ ಬಿಡುಗಡೆ ಮಾಡಿರುವ ಆಲ್‌ ಇನ್‌ ಒನ್‌ ಕ್ಯುಆರ್‌ ಸೇವೆಯ ಮೂಲಕ ತನ್ನ ವರ್ತಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ನಿರ್ಧರಿಸಿದೆ. ಪೇಟಿಎಂ ವಾಲೆಟ್‌, ರೂಪೇ ಕಾರ್ಡ್‌ ಮತ್ತು ಎಲ್ಲಾ ಯುಪಿಐ ಆಧಾರಿತ ಪೇಮೆಂಟ್‌ ಆ್ಯಪ್‌ಗಳ ಮೂಲಕ ಯಾವುದೇ ಶುಲ್ಕ ಇಲ್ಲದೆ ಹಣ ಪಡೆಯಬಹುದಾದ ವ್ಯವಸ್ಥೆಯೇ ಆಲ್‌ ಇನ್‌ ಒನ್‌ ಕ್ಯುಆರ್‌ ಆಗಿದೆ. ರಾಜ್ಯದಲ್ಲಿನ ವಹಿವಾಟು ಎರಡುಪಟ್ಟು ಹೆಚ್ಚಿಸುವ ಗುರಿಯನ್ನು ಕಂಪನಿ ಹೊಂದಿದೆ.

‘ಡಿಜಿಟಲ್‌ ಪಾವತಿಯಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದ್ದು, 2019ರಲ್ಲಿ ಕಂಪನಿಯ ಒಟ್ಟಾರೆ ಡಿಜಿಟಲ್‌ ವಹಿವಾಟಿನಲ್ಲಿ ರಾಜ್ಯದ ಪಾಲು ಶೇ 60ರಷ್ಟಿದೆ. ಪೇಟಿಎಂ ಬಿಸಿನೆಸ್‌ ಆ್ಯಪ್‌ ಮೂಲಕ ಡಿಜಿಟಲ್‌ ಆರ್ಥಿಕತೆಗೆ ಬರಲು ವರ್ತಕರಿಗೆ ನೆರವಾಗುತ್ತಿದ್ದೇವೆ. ಇದೀಗ ಹೊಸ ಕ್ಯುಆರ್‌ ಸೌಲಭ್ಯ ನೀಡಿರುವುದರಿಂದ ವಹಿವಾಟು ನಡೆಸುವುದು ಇನ್ನಷ್ಟು ಸರಳವಾಗಲಿದೆ’ ಎಂದು ಕಂಪನಿಯ ಹಿರಿಯ ಉಪಾಧ್ಯಕ್ಷ ಸೌರಭ್‌ ಶರ್ಮಾ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.