ADVERTISEMENT

ಪೇಟಿಎಂನಿಂದ ಸಿಬ್ಬಂದಿ ಕಡಿತ

ಪಿಟಿಐ
Published 10 ಜೂನ್ 2024, 14:38 IST
Last Updated 10 ಜೂನ್ 2024, 14:38 IST
ಪೇಟಿಎಂ
ಪೇಟಿಎಂ   

ನವದೆಹಲಿ: ಸಂಸ್ಥೆಯ ಪುನರ್‌ ರಚನೆ ಭಾಗವಾಗಿ ಪೇಟಿಎಂನ ಮಾತೃಸಂಸ್ಥೆಯಾದ ಒನ್‌97 ಕಮ್ಯುನಿಕೇಷನ್‌ ಸಿಬ್ಬಂದಿ ಕಡಿತಕ್ಕೆ ಮುಂದಾಗಿದೆ. 

ಮಾರ್ಚ್‌ ತ್ರೈಮಾಸಿಕದಲ್ಲಿ ಪೇಟಿಎಂನ ಮಾರಾಟ ವಿಭಾಗದ ನೌಕರರ ಸಂಖ್ಯೆಯು 3,500 ಕಡಿಮೆ ಆಗಿದ್ದು, ಒಟ್ಟು 36,521 ಸಿಬ್ಬಂದಿಯಿದ್ದಾರೆ ಎಂದು ಕಂಪನಿ ತಿಳಿಸಿದೆ. ಪೇಟಿಎಂ ಪೇಮೆಂಟ್‌ ಬ್ಯಾಂಕ್‌ ಸೇವೆಗಳ ಮೇಲೆ ಆರ್‌ಬಿಐ ವಿಧಿಸಿದ ನಿರ್ಬಂಧದಿಂದಾಗಿ ಸಂಸ್ಥೆ ಸಿಬ್ಬಂದಿ ಕಡಿತಕ್ಕೆ ಮುಂದಾಗಿದೆ.

ಕಂಪನಿಯ ಪುನರ್‌ ರಚನೆಯ ಭಾಗವಾಗಿ ಕೆಲಸ ಕಳೆದುಕೊಳ್ಳಲಿರುವ ಸಿಬ್ಬಂದಿಗೆ ಹೊಸ ಕೆಲಸ ಕಂಡುಕೊಳ್ಳಲು ಕಂಪನಿಯು ನೆರವಾಗಲಿದೆ. ಇದಕ್ಕಾಗಿ ಕಂಪನಿಯ ಮಾನವ ಸಂಪನ್ಮೂಲ ವಿಭಾಗವು ಪ್ರಸ್ತುತ ನೇಮಕ ಮಾಡಿಕೊಳ್ಳುತ್ತಿರುವ 30ಕ್ಕೂ ಹೆಚ್ಚು ಕಂಪನಿಗಳೊಂದಿಗೆ ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಎಂದು ಕಂಪನಿ ಸೋಮವಾರ ತಿಳಿಸಿದೆ. ಆದರೆ, ಕೆಲಸ ಕಳೆದುಕೊಂಡ ಒಟ್ಟು  ಉದ್ಯೋಗಿಗಳ ಸಂಖ್ಯೆಯನ್ನು ಪೇಟಿಎಂ ಬಹಿರಂಗಪಡಿಸಿಲ್ಲ.

ADVERTISEMENT

ಕಂಪನಿ ಉದ್ಯೋಗಿಗಳಿಗೆ ನೀಡಬೇಕಾದ ಬೋನಸ್‌ ಅನ್ನು ವಿತರಿಸುತ್ತದೆ ಹಾಗೂ ಪ್ರಕ್ರಿಯೆಯಲ್ಲಿ ನ್ಯಾಯಸಮ್ಮತತೆ ಮತ್ತು ಪಾರದರ್ಶಕತೆಯನ್ನು ಕಾಪಾಡಲಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.