ಬೆಂಗಳೂರು: ಬಳಕೆದಾರರು ತಮ್ಮ ಖರ್ಚಿನ ಮೇಲೆ ನಿಗಾವಹಿಸಲು ಮತ್ತು ತೆರಿಗೆ ಸಲ್ಲಿಕೆ ಪ್ರಕ್ರಿಯೆಯನ್ನು ಸರಳಗೊಳಿಸಲು ನೆರವಾಗುವಂತೆ ಪೇಟಿಎಂನಿಂದ ಹೊಸದಾಗಿ ಯುಪಿಐ ಸ್ಟೇಟ್‌ಮೆಂಟ್ ಡೌನ್‌ಲೋಡ್ ಸೇವೆ ಪ್ರಾರಂಭಿಸಲಾಗಿದೆ.
ಈ ಸೇವೆಯು ಸರಳ ಮತ್ತು ಸ್ಪಷ್ಟವಾದ ವಹಿವಾಟಿನ ವಿವರ ಒದಗಿಸುತ್ತಿದೆ. ಇದರಿಂದ ಬಜೆಟ್ ಮಾಡಲು ಮತ್ತು ಖರ್ಚನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದಾಗಿದೆ ಎಂದು ಪೇಟಿಎಂ ತಿಳಿಸಿದೆ.
ಪ್ರಸ್ತುತ ಈ ಸೌಲಭ್ಯವು ಪಿಡಿಎಫ್ ರೂಪದಲ್ಲಿ ಲಭ್ಯವಿದೆ. ಶೀಘ್ರವೇ ಎಕ್ಸೆಲ್ ರೂಪದಲ್ಲಿ ಲಭ್ಯವಾಗಲಿದೆ. ಬಳಕೆದಾರರು ತಮ್ಮ ಅಗತ್ಯಕ್ಕೆ ತಕ್ಕಂತೆ ನಿರ್ದಿಷ್ಟ ದಿನಾಂಕ ಅಥವಾ ಆರ್ಥಿಕ ವರ್ಷದ ಸ್ಟೇಟ್‌ಮೆಂಟ್ ಅನ್ನು ಡೌನ್‌ಲೋಡ್ ಮಾಡಬಹುದಾಗಿದೆ ಎಂದು ತಿಳಿಸಿದೆ.
ಮೊಬೈಲ್ ಪೇಮೆಂಟ್‌ಗಳ ಬಳಕೆ ಹೆಚ್ಚುತ್ತಿದೆ. ಇದರಿಂದ ಈ ಸೌಲಭ್ಯವು ಬಳಕೆದಾರರ ಪಾರದರ್ಶಕತೆ ಮತ್ತು ಸುಲಭವಾಗಿ ಹಣಕಾಸು ನಿರ್ವಹಣೆಯ ಅಗತ್ಯತೆ ಪೂರೈಸಲು ಸಹಾಯ ಮಾಡುತ್ತದೆ ಎಂದು ಹೇಳಿದೆ.
ಈ ಸೇವೆಯೊಂದಿಗೆ ಬಳಕೆದಾರರು ಪಾವತಿಸುವ ಮೊತ್ತ, ಪಡೆಯುವವರ ವಿವರ, ಬ್ಯಾಂಕ್ ಖಾತೆ ಮಾಹಿತಿ, ಸಮಯ ಮುಂತಾದ ಎಲ್ಲಾ ವಿವರವನ್ನು ಸುಲಭವಾದ ವೀಕ್ಷಿಸಬಹುದಾಗಿದೆ. ಈ ಸ್ಟೇಟ್‌ಮೆಂಟ್ ಡೌನ್‌ಲೋಡ್ ಸೌಲಭ್ಯ ‘ಬ್ಯಾಲೆನ್ಸ್ ಆ್ಯಂಡ್ ಹಿಸ್ಟರಿ’ ವಿಭಾಗದಲ್ಲಿ ಲಭ್ಯವಿದೆ. ಅಲ್ಲಿ ಬಳಕೆದಾರರು ಸ್ಟೇಟ್‌ಮೆಂಟ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.