ಬೆಂಗಳೂರು: ಜಾಗತಿಕ ಹಣಕಾಸು ಜಾಲ ಸೃಜಿಸಲು ಗುಜರಾತ್‌ನ ಗಿಫ್ಟ್ ಸಿಟಿಯಲ್ಲಿ ₹100 ಕೋಟಿ ಹೂಡಿಕೆ ಮಾಡುವುದಾಗಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಪೋಷಕ ಕಂಪನಿ ಒನ್ 97 ಕಮ್ಯುನಿಕೇಷನ್ ಹೇಳಿದೆ ಎಂದು ‘ಮನಿಕಂಟ್ರೋಲ್ ಡಾಟ್ ಕಾಂ’ ವರದಿ ಮಾಡಿದೆ.
‘ಗುಜರಾತ್‌ನ ಗಿಫ್ಟ್ ಸಿಟಿಯಲ್ಲಿ ಅಧೀನ ಸಂಸ್ಥೆಯೊಂದನ್ನು ಸ್ಥಾಪಿಸಲು ಬೇಕಾದ ಅಗತ್ಯವಾದ ಅನುಮೋದನೆಗಳನ್ನು ಪಡೆಯಲು ಪಕ್ರಿಯೆ ಪ್ರಾರಂಭಿಸಲು ಕಂಪನಿಯ ನಿರ್ದೇಶಕರ ಮಂಡಳಿಯಲ್ಲಿ ನಿರ್ಧರಿಸಲಾಗಿದೆ ಎಂದು ನಿಮಗೆ ತಿಳಿಸಲು ಹರ್ಷಿಸುತ್ತೇವೆ. ಈ ಪ್ರಕ್ರಿಯೆಗೆ 6 ತಿಂಗಳು ಹಿಡಿಯಬಹುದು’ ಎಂದು ಆಗಸ್ಟ್ 21ರಂದು ಬಿಡುಗಡೆ ಮಾಡಲಾದ ಕಂಪನಿಯ ವಾರ್ಷಿಕ ವರದಿಯಲ್ಲಿ ಹೇಳಲಾಗಿದೆ.
ಜನವರಿ 10ರಂದು ಷೇರುಪೇಟೆಗೆ ನೀಡಿದ ಮಾಹಿತಿಯಲ್ಲೂ ಕಂಪನಿ ಇದನ್ನು ಹೇಳಿತ್ತು.
ಗಿಫ್ಟ್ ಸಿಟಿಯಲ್ಲಿನ ಈ ಹೂಡಿಕೆಯು ಕೃತಕ ಬುದ್ಧಿಮತ್ತೆ-ಚಾಲಿತ ಅಂತರರಾಷ್ಟ್ರೀಯ ಪಾವತಿ ತಂತ್ರಜ್ಞಾನವನ್ನು ನಿರ್ಮಿಸುವ ಪ್ರಮುಖ ಹೆಜ್ಜೆಯಾಗಲಿದೆ. ಇದು ಜಾಗತಿಕ ಅವಕಾಶಗಳನ್ನು ಪ್ರಸ್ತುತಪಡಿಸುತ್ತದೆ ಎಂದು ಪೇಟಿಎಂಎ ಸಂಸ್ಥಾಪಕ ಮತ್ತು ಸಿಇಒ ವಿಜಯ್ ಶೇಖರ್ ಶರ್ಮಾ ಈ ಹಿಂದೆ ಹೇಳಿದ್ದರು.
ಗುಜರಾತ್ ಅಂತರರಾಷ್ಟ್ರೀಯ ಹಣಕಾಸು ತಂತ್ರಜ್ಞಾನ ನಗರ ( Gujarat International Finance Tec-City – GIFT) ದೇಶದ ಮೊದಲ ಜಾಗತಿಕ ಹಣಕಾಸು ಹಬ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.