ADVERTISEMENT

ಪೇಟಿಎಂ ಬ್ಯಾಂಕ್‌ ವಿರುದ್ಧ ಏಕಾಏಕಿ ಕ್ರಮಕೈಗೊಂಡಿಲ್ಲ: ಆರ್‌ಬಿಐ

ಪಿಟಿಐ
Published 8 ಫೆಬ್ರುವರಿ 2024, 16:45 IST
Last Updated 8 ಫೆಬ್ರುವರಿ 2024, 16:45 IST
ತಿಂಗಳಾಂತ್ಯಕ್ಕೆ ಪೇಟಿಎಂ ಬ್ಯಾಂಕ್‌
ತಿಂಗಳಾಂತ್ಯಕ್ಕೆ ಪೇಟಿಎಂ ಬ್ಯಾಂಕ್‌   

ನವದೆಹಲಿ: ‘ಪೇಟಿಎಂ ಪೇಮೆಂಟ್‌ ಬ್ಯಾಂಕ್‌ ವಿರುದ್ಧ ಏಕಾಏಕಿ ಕ್ರಮಕೈಗೊಂಡಿಲ್ಲ. ನಿಯಮಾವಳಿಗಳ ಪಾಲನೆಯಲ್ಲಿ ಎಸಗಿರುವ ಲೋಪ ಸರಿಪಡಿಸಿಕೊಳ್ಳಲು ಸಾಕಷ್ಟು ಕಾಲಾವಕಾಶ ನೀಡಲಾಗಿತ್ತು. ನಿರ್ಲಕ್ಷ್ಯವಹಿಸಿದ್ದರಿಂದ ನಿರ್ಬಂಧ ಹೇರಲಾಗಿದೆ’ ಎಂದು ಆರ್‌ಬಿಐ ಡೆಪ್ಯುಟಿ ಗವರ್ನರ್‌ ಸ್ವಾಮಿನಾಥನ್‌ ಜೆ. ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗ್ರಾಹಕರ ರಕ್ಷಣೆಯ ದೃಷ್ಟಿಯಿಂದ ಇಂತಹ ಕ್ರಮ ಅನಿವಾರ್ಯ’ ಎಂದರು.

ಗವರ್ನರ್‌ ಶಕ್ತಿಕಾಂತ ದಾಸ್‌ ಮಾತನಾಡಿ, ‘ಪೇಟಿಎಂ ಪೇಮೆಂಟ್‌ ಬ್ಯಾಂಕ್‌ ಮೇಲಷ್ಟೇ ನಿರ್ಬಂಧ ಹೇರಲಾಗಿದೆ. ಈ ಬಗ್ಗೆ ನಾಗರಿಕರಿಂದ ಸಾಕಷ್ಟು ಪ್ರಶ್ನೆಗಳನ್ನು ಸ್ವೀಕರಿಸಿದ್ದೇವೆ. ಮುಂದಿನ ವಾರ ಗ್ರಾಹಕರ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರ ನೀಡಲಾಗುವುದು’ ಎಂದು ತಿಳಿಸಿದರು.

ADVERTISEMENT

ಡಿಜಿಟಲ್‌ ರೂಪಾಯಿ:

ಶೀಘ್ರವೇ, ಆಫ್‌ಲೈನ್‌ನಲ್ಲಿಯೂ ಡಿಜಿಟಲ್‌ ರೂಪಾಯಿಯ ಪ್ರಾಯೋಗಿಕ ಬಳಕೆಗೆ ಚಾಲನೆ ನೀಡಲಾಗುವುದು ಎಂದು ದಾಸ್‌ ತಿಳಿಸಿದರು.

2022ರ ಡಿಸೆಂಬರ್‌ನಲ್ಲಿ ಚಿಲ್ಲರೆ ವಹಿವಾಟುಗಳಿಗೆ ಸಂಬಂಧಿಸಿದಂತೆ ಡಿಜಿಟಲ್ ರೂಪಾಯಿಯ ಪ್ರಾಯೋಗಿಕ ಬಳಕೆಗೆ ಆರ್‌ಬಿಐ ಚಾಲನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.