ADVERTISEMENT

ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್ ಬೆಲೆ ಸ್ಥಿರ: ಆಂಧ್ರ, ಅಸ್ಸಾಂನಲ್ಲಿ ಇಳಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ನವೆಂಬರ್ 2024, 2:07 IST
Last Updated 26 ನವೆಂಬರ್ 2024, 2:07 IST
<div class="paragraphs"><p>ಪೆಟ್ರೋಲ್‌, ಡೀಸೆಲ್ </p></div>

ಪೆಟ್ರೋಲ್‌, ಡೀಸೆಲ್

   

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ ಪೆಟ್ರೋಲ್‌ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಬೆಲೆಗಳು ಸ್ಥಿರವಾಗಿವೆ ಎಂದು ರಾಷ್ಟ್ರೀಯ ತೈಲ ಮಾರುಕಟ್ಟೆ ವರದಿಗಳು ತಿಳಿಸಿವೆ

ಬೆಂಗಳೂರಿನಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ ₹102.92 ಇದ್ದು, ಡೀಸೆಲ್ ಬೆಲೆ ₹88.99 ಇದೆ.

ADVERTISEMENT

ದೇಶದ ಕೆಲವು ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದೆ. ಆಂಧ್ರಪ್ರದೇಶದಲ್ಲಿ ಪೆಟ್ರೋಲ್ ಲೀಟರ್‌ಗೆ 85 ಪೈಸೆ  ಮತ್ತು ಡೀಸೆಲ್ ಲೀಟರ್‌ಗೆ 79 ಪೈಸೆ ಇಳಿಕೆಯಾಗಿದೆ.

ಅಸ್ಸಾಂನಲ್ಲಿ ಪೆಟ್ರೋಲ್ 36 ಪೈಸೆ ಇಳಿಕೆಯಾಗಿದ್ದು ಡೀಸೆಲ್ 33 ಪೈಸೆ ಇಳಿಕೆಯಯಾಗಿದೆ. ಗೋವಾದಲ್ಲಿ ಪೆಟ್ರೋಲ್ 70 ಪೈಸೆ,  ಡೀಸೆಲ್ 67 ಪೈಸೆ ಇಳಿಕೆಯಾಗಿದೆ. ಹಿಮಾಚಲದಲ್ಲಿ ಪೆಟ್ರೋಲ್ 17 ಪೈಸೆ, ಡೀಸೆಲ್ 15 ಪೈಸೆ ಇಳಿಕೆಯಾಗಿದೆ. 

ಉಳಿದಂತೆ ಎಲ್ಲಾ ರಾಜ್ಯಗಳಲ್ಲೂ ಪೆಟ್ರೋಲ್‌ ಮತ್ತು ಡಿಸೇಲ್‌ ಬೆಲೆ ಸ್ಥಿರವಾಗಿದೆ.

ದೆಹಲಿಯಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ ₹94 ಆಗಿದ್ದು, ಡೀಸೆಲ್‌ ₹87.67 ಆಗಿದೆ

ಚೆನ್ನೈನಲ್ಲಿ ಪೆಟ್ರೋಲ್‌ ಲೀಟರ್‌ಗೆ ₹100 ಹಾಗೂ ಡೀಸೆಲ್ ₹92.48 ಇದೆ.

ಮುಂಬೈನಲ್ಲಿ ಪೆಟ್ರೋಲ್‌ ಲೀಟರ್‌ಗೆ ₹103.44 ಹಾಗೂ ಡೀಸೆಲ್ ₹89.97 ಇದೆ.

ಕೋಲ್ಕತ್ತಾದಲ್ಲಿ ಪೆಟ್ರೋಲ್‌ ಲೀಟರ್‌ಗೆ ₹104.95 ಹಾಗೂ ಡೀಸೆಲ್ ₹91.76 ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.