ಬೆಂಗಳೂರು: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸತತ ನಾಲ್ಕನೇ ದಿನವೂ ಇಂಧನ ದರಗಳನ್ನು ತಗ್ಗಿಸಿವೆ.
ಭಾನುವಾರ ಪೆಟ್ರೋಲ್ ದರ 26 ಪೈಸೆ, ಡೀಸೆಲ್ 17 ಪೈಸೆಯಷ್ಟು ಕಡಿಮೆಯಾಗಿದೆ.ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ₹ 82.38 ಮತ್ತು ಡೀಸೆಲ್ ₹ 75.58ರಂತೆ ಮಾರಾಟವಾಗಿವೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ತಗ್ಗುತ್ತಿದೆ. ಹೀಗಾಗಿ ದೇಶದಲ್ಲಿ ಇಂಧನ ದರಗಳಲ್ಲಿಯೂ ಇಳಿಕೆ ಕಾಣಲಾರಂಭಿಸಿದೆ.
ಗುರುವಾರದಿಂದ ಭಾನುವಾರದವರೆಗೆ ಒಂದು ಲೀಟರ್‌ಪೆಟ್ರೋಲ್ ದರದಲ್ಲಿ ₹ 1.10 ಹಾಗೂ ಡೀಸೆಲ್ ದರದಲ್ಲಿ 50 ಪೈಸೆ ಕಡಿಮೆಯಾದಂತಾಗಿದೆ.
ವಾರದ ವಹಿವಾಟಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಕ್ರಮವಾಗಿ 99 ಪೈಸೆ ಮತ್ತು 19 ಪೈಸೆಗಳಷ್ಟು ಇಳಿಕೆ ಕಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.