ನವದೆಹಲಿ: ಕಳೆದ ಏಳು ದಿನಗಳಲ್ಲಿ ಆರನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಏರಿಕೆ ಕಂಡುಬಂದಿದೆ.
ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ದೆಹಲಿಯಲ್ಲಿ ಪೆಟ್ರೋಲ್ (30 ಪೈಸೆ/ಲೀಟರ್) ಹಾಗೂ ಡೀಸೆಲ್(35 ಪೈಸೆ/ಲೀಟರ್) ದರಗಳನ್ನು ಹೆಚ್ಚಿಸಿವೆ.
ದರ ಹೆಚ್ಚಳದಿಂದಾಗಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆಯು ಲೀಟರಿಗೆ ₹99.41 ಹಾಗೂ ಡೀಸೆಲ್ ಬೆಲೆಯು ₹90.77ಕ್ಕೆ ಏರಿಕೆಯಾಗಿದೆ.
ಮುಂಬೈನಲ್ಲಿ ಪೆಟ್ರೋಲ್ (31 ಪೈಸೆ/ಲೀಟರ್) ಹಾಗೂ ಡೀಸೆಲ್(37 ಪೈಸೆ/ಲೀಟರ್) ದರಗಳನ್ನು ಹೆಚ್ಚಿಸಲಾಗಿದೆ.
ಈ ಮೂಲಕ ಮುಂಬೈನಲ್ಲಿ ಪೆಟ್ರೋಲ್ ಬೆಲೆಯು ಲೀಟರಿಗೆ ₹114.19 ಹಾಗೂ ಡೀಸೆಲ್ ಬೆಲೆಯು ₹98.50ಕ್ಕೆ ಏರಿಕೆಯಾಗಿದೆ.
ಭಾನುವಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಲೀಟರಿಗೆ ತಲಾ 50 ಪೈಸೆಯಷ್ಟು ಹೆಚ್ಚಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.