ADVERTISEMENT

ಸತತ ಐದನೇ ದಿನ ಪೆಟ್ರೋಲ್‌ 30 ಪೈಸೆ, ಡೀಸೆಲ್‌ 36 ಪೈಸೆ ಏರಿಕೆ

ಪಿಟಿಐ
Published 13 ಫೆಬ್ರುವರಿ 2021, 8:28 IST
Last Updated 13 ಫೆಬ್ರುವರಿ 2021, 8:28 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಸತತ ಐದನೇ ದಿನ ಪೆಟ್ರೋಲ್‌ ಹಾಗೂ ಡೀಸೆಲ್‌ ದರ ಏರಿಕೆಯಾಗಿದ್ದು, ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ ₹95 ರ ಸನಿಹಕ್ಕೆ ತಲುಪಿದೆ.

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳ ಅಧಿಸೂಚನೆ ಪ್ರಕಾರ ಶನಿವಾರ ಪೆಟ್ರೋಲ್‌ ಲೀಟರ್‌ಗೆ 30 ಪೈಸೆ ಮತ್ತು ಡೀಸೆಲ್‌ ಲೀಟರ್‌ಗೆ 36 ಪೈಸೆ ಹೆಚ್ಚಿಸಲಾಗಿದೆ.

ದೆಹಲಿಯಲ್ಲಿ ಪೆಟ್ರೋಲ್‌ ದರ ₹88.41 ಕ್ಕೆ ತಲುಪಿದ್ದರೆ, ಡೀಸೆಲ್‌ ದರ ₹78.74 ಕ್ಕೆ ಏರಿಕೆಯಾಗಿದೆ. ಮುಂಬೈಯಲ್ಲಿ ಪೆಟ್ರೋಲ್‌ ₹94.93 ಹಾಗೂ ಡೀಸೆಲ್‌ ₹85.70 ರಷ್ಟಿದೆ.

ADVERTISEMENT

ಕಳೆದ ಒಂದು ವಾರದಲ್ಲಿ ಪೆಟ್ರೋಲ್‌ ಪ್ರತಿ ಲೀಟರ್‌ಗೆ ₹1.51 ಪೈಸೆ, ಡೀಸೆಲ್‌ ಪ್ರತಿ ಲೀಟರ್‌ಗೆ ₹1.56 ಪೈಸೆ ಹೆಚ್ಚಳವಾಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ ₹91.09 ಆಗಿದ್ದು, ಡೀಸೆಲ್ ದರ ಪ್ರತಿ ಲೀಟರ್‌ಗೆ ₹83.09 ಆಗಿದೆ.

ಇಂಧನ ದರ ಏರಿಕೆ ಖಂಡಿಸಿ ಕಾಂಗ್ರೆಸ್‌ ಸೇರಿದಂತೆ ವಿರೋಧ ಪಕ್ಷಗಳು ಕೇಂದ್ರ ಸರ್ಕಾರವನ್ನು ಟೀಕಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.