ADVERTISEMENT

ತೈಲ ದರ ಏಳು ದಿನಗಳಲ್ಲಿ ಆರು ಬಾರಿ ಏರಿಕೆ

ಪಿಟಿಐ
Published 28 ಮಾರ್ಚ್ 2022, 10:32 IST
Last Updated 28 ಮಾರ್ಚ್ 2022, 10:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಸೋಮವಾರ ಪೆಟ್ರೋಲ್‌ ದರವನ್ನು ಲೀಟರಿಗೆ 30 ಪೈಸೆ ಮತ್ತು ಡೀಸೆಲ್‌ ದರವನ್ನು 35 ಪೈಸೆಯಷ್ಟು ಹೆಚ್ಚಿಸಿವೆ. ಏಳು ದಿನಗಳಲ್ಲಿ ಆರನೇ ಬಾರಿಗೆ ಬೆಲೆ ಹೆಚ್ಚಳ ಮಾಡಲಾಗಿದ್ದು, ಪೆಟ್ರೋಲ್‌ ದರ ಲೀಟರಿಗೆ ₹ 4ರಷ್ಟು ಮತ್ತು ಡೀಸೆಲ್‌ ದರ ₹ 4.10ರಷ್ಟು ಏರಿಕೆ ಆದಂತಾಗಿದೆ.

ತೈಲ ಮಾರಾಟ ಕಂಪನಿಗಳ ದರ ಅಧಿಸೂಚನೆಯ ಪ್ರಕಾರ ದೆಹಲಿಯಲ್ಲಿ, ಪೆಟ್ರೋಲ್‌ ದರ ₹ 99.41ಕ್ಕೆ ಮತ್ತು ಡೀಸೆಲ್‌ ದರ ₹ 90.77ಕ್ಕೆ ಏರಿಕೆ ಆಗಿದೆ. ಸ್ಥಳೀಯ ಮಾರಾಟ ತೆರಿಗೆಗೆ ಅನುಗುಣವಾಗಿ ರಾಜ್ಯದಿಂದ ರಾಜ್ಯಕ್ಕೆ ಮಾರಾಟ ದರದಲ್ಲಿ ಏರಿಳಿತ ಆಗುತ್ತದೆ. ಎಚ್‌ಪಿಸಿಎಲ್‌ ಜಾಲತಾಣದಲ್ಲಿ ಇರುವ ಮಾಹಿತಿಯ ಪ್ರಕಾರ, ‍ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ₹ 104.63ಕ್ಕೆ, ಡೀಸೆಲ್‌ ದರ ₹ 88.89ಕ್ಕೆ ತಲುಪಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT