ADVERTISEMENT

ಹಬ್ಬದ ಋತು: ದೇಶದಲ್ಲಿ ಪೆಟ್ರೋಲ್ ಮಾರಾಟ ಶೇ 7.3ರಷ್ಟು ಹೆಚ್ಚಳ

ಪಿಟಿಐ
Published 1 ನವೆಂಬರ್ 2024, 13:16 IST
Last Updated 1 ನವೆಂಬರ್ 2024, 13:16 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ದೇಶದಲ್ಲಿ ಪೆಟ್ರೋಲ್ ಮಾರಾಟವು ಅಕ್ಟೋಬರ್‌ ತಿಂಗಳಲ್ಲಿ ಶೇ 7.3ರಷ್ಟು ಏರಿಕೆಯಾಗಿದೆ. ಆದರೆ, ಇದೇ ವೇಳೆ ಡೀಸೆಲ್‌ ಬಳಕೆ ಶೇ 3.3ರಷ್ಟು ಕಡಿಮೆಯಾಗಿದೆ ಎಂದು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಶುಕ್ರವಾರ ತಿಳಿಸಿವೆ.

ಅಕ್ಟೋಬರ್‌ನಲ್ಲಿ 31 ಲಕ್ಷ ಟನ್‌ ಪೆಟ್ರೋಲ್‌ ಮಾರಾಟವಾಗಿದೆ. ಹಿಂದಿನ ವರ್ಷದ ಇದೇ ತಿಂಗಳಲ್ಲಿ 28.7 ಲಕ್ಷ ಟನ್‌ ಮಾರಾಟವಾಗಿತ್ತು. ಡೀಸೆಲ್‌ ಮಾರಾಟವು ಶೇ 3.3ರಷ್ಟು ಕಡಿಮೆಯಾಗಿದ್ದು, 67 ಲಕ್ಷ ಟನ್‌ ಮಾರಾಟವಾಗಿದೆ. 

ADVERTISEMENT

ಹಬ್ಬದ ಋತುವಿನ ಅಂಗವಾಗಿ ಗ್ರಾಹಕರು ವೈಯಕ್ತಿಕ ವಾಹನಗಳನ್ನು ಹೆಚ್ಚು ಬಳಕೆ ಮಾಡಿದ್ದಾರೆ. ಇದರಿಂದ ಪೆಟ್ರೋಲ್‌ ಮಾರಾಟದಲ್ಲಿ ಏರಿಕೆಯಾಗಿದೆ. ಮಳೆಯಿಂದ ಕೃಷಿ ಚಟುವಟಿಕೆಗಳು ಕಡಿಮೆಯಾಗಿದೆ. ಟ್ರ್ಯಾಕ್ಟರ್‌ ಮತ್ತು ಕೊಯ್ಲು ಯಂತ್ರಗಳ ಬಳಕೆಯೂ ಕಡಿಮೆಯಾಗಿದೆ. ಇದೇ ಡೀಸೆಲ್‌ ಮಾರಾಟದ ಇಳಿಕೆಗೆ ಕಾರಣ ಎಂದು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.