ಬೆಂಗಳೂರು: ಡಿಜಿಟಲ್ ಪಾವತಿ ಸೇವೆಗಳನ್ನು ನೀಡುವ ಫೋನ್‌ಪೆ ಕಂಪನಿಯ ತನ್ನ ವೇದಿಕೆಯ ಮೂಲಕ ಅಕ್ಟೋಬರ್‌ನಲ್ಲಿ 200 ಕೋಟಿಗೂ ಅಧಿಕ ಸಂಖ್ಯೆಯ ವ್ಯವಹಾರ ನಡೆದಿದೆ ಎಂದು ಹೇಳಿಕೊಂಡಿದೆ.
ಇದೇ ವರ್ಷದ ಫೆಬ್ರುವರಿಯಲ್ಲಿ ತಿಂಗಳ ವ್ಯವಹಾರವು ಸಂಖ್ಯೆಯು 100 ಕೋಟಿಯನ್ನು ತಲುಪಿತ್ತು.
ತಿಂಗಳಿನಲ್ಲಿ ನಡೆದಿರುವ ಒಟ್ಟಾರೆ ವ್ಯವಹಾರದಲ್ಲಿ ಶೇಕಡ 80ರಷ್ಟು ಎರಡು, ಮೂರನೇ ದರ್ಜೆಯ ಮತ್ತು ಇತರೆ ನಗರಗಳಿಂದ ಬಂದಿದೆ. ಈ ಮೂಲಕ ಡಿಜಿಟಲ್ ಪಾವತಿಯು ದೇಶದಾದ್ಯಂತ ವ್ಯಾಪಿಸುತ್ತಿದೆ ಎನ್ನುವುದು ತೋರಿಸುತ್ತಿದೆ ಎಂದು ಫೋನ್‌ಪೆ ಕಂಪನಿಯ ಸ್ಥಾಪಕ ಸಮೀರ್ ನಿಗಮ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.