ನವದೆಹಲಿ: ಫಿನ್ಟೆಕ್ ಕಂಪನಿ ಫೋನ್ಪೆ ವರಮಾನವು 2022–23ನೇ ಹಣಕಾಸು ವರ್ಷದಲ್ಲಿ ಶೇ 77ರಷ್ಟು ಹೆಚ್ಚಾಗಿ ₹2,914 ಕೋಟಿಗೆ ತಲುಪಿದೆ.
ವಾಲ್ಮಾರ್ಟ್ ಒಡೆತನದ ಕಂಪನಿಯು 2021–22ನೇ ಹಣಕಾಸು ವರ್ಷದಲ್ಲಿ ₹1,646 ಕೋಟಿ ವರಮಾನ ಹೊಂದಿತ್ತು.
ಮಾರುಕಟ್ಟೆ ವಿಸ್ತರಣೆ ಮತ್ತು ಡಿಜಿಟಲ್ ಪಾವತಿ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿ ಇರುವುದರಿಂದ ಈ ಬೆಳವಣಿಗೆ ಸಾಧ್ಯವಾಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.