ADVERTISEMENT

ಪಿರಾಮಲ್ ಸಮೂಹದಿಂದ ಡಿಎಚ್‌ಎಫ್‌ಎಲ್‌ ಸ್ವಾಧೀನ

ಪಿಟಿಐ
Published 29 ಸೆಪ್ಟೆಂಬರ್ 2021, 16:17 IST
Last Updated 29 ಸೆಪ್ಟೆಂಬರ್ 2021, 16:17 IST

ಮುಂಬೈ: ದಿವಾನ್ ಹೌಸಿಂಗ್ ಫೈನಾನ್ಸ್ (ಡಿಎಚ್‌ಎಫ್‌ಎಲ್‌) ಕಂಪನಿಗೆ ಸಾಲ ನೀಡಿದ್ದವರಿಗೆ ಒಟ್ಟು ₹ 34,250 ಕೋಟಿ ಪಾವತಿಸಿ, ಕಂಪನಿಯನ್ನು ಸ್ವಾಧೀನಕ್ಕೆ ತೆಗೆದುಕೊಂಡಿರುವುದಾಗಿ ಪಿರಾಮಲ್ ಎಂಟರ್‌ಪ್ರೈಸಸ್‌ ಬುಧವಾರ ತಿಳಿಸಿದೆ.

ಡಿಎಚ್‌ಎಫ್‌ಎಲ್‌ಗೆ ಸಾಲ ನೀಡಿದ್ದವರಿಗೆ ಹಾಗೂ ಈ ಕಂಪನಿಯಲ್ಲಿ ನಿಶ್ಚಿತ ಠೇವಣಿ ಇರಿಸಿದ್ದವರಿಗೆ ಒಟ್ಟು ₹ 38 ಸಾವಿರ ಕೋಟಿ ಮರಳಿ ಸಿಗಲಿದೆ. ಪಿರಾಮಲ್‌ ಪಾವತಿಸುವ ₹ 34,250 ಕೋಟಿ ಹಾಗೂ ಡಿಎಚ್‌ಎಫ್‌ಎಲ್‌ ಬಳಿ ಇರುವ ಸರಿಸುಮಾರು ₹ 3,800 ಕೋಟಿ ಸೇರಿಸಿದರೆ ಇಷ್ಟು ಮೊತ್ತ ಆಗಲಿದೆ.‌

‘ನಾವು ಪಿರಾಮಲ್ ಕ್ಯಾಪಿಟಲ್ ಆ್ಯಂಡ್ ಹೌಸಿಂಗ್ ಫೈನಾನ್ಸ್‌ ಲಿಮಿಟೆಡ್‌ (ಪಿಸಿಎಚ್‌ಎಫ್‌ಎಲ್‌) ಹಾಗೂ ಡಿಎಚ್‌ಎಫ್‌ಎಲ್ ಕಂಪನಿಗಳನ್ನು ನಾವು ವಿಲೀನ ಮಾಡುತ್ತೇವೆ. ವಿಲೀನವು ಮುಂದಿನ ಎರಡು ವಾರಗಳಲ್ಲಿ ಆಗಲಿದೆ’ ಎಂದು ಪಿರಾಮಲ್ ಸಮೂಹದ ಅಧ್ಯಕ್ಷ ಅಜಯ್ ಪಿರಾಮಲ್ ಹೇಳಿದ್ದಾರೆ. ಮುಂದಿನ ಮೂರರಿಂದ ನಾಲ್ಕು ವರ್ಷಗಳಲ್ಲಿ ದೇಶದ ಒಂದು ಸಾವಿರ ಕಡೆಗಳಲ್ಲಿ ಕಂಪನಿ ಅಸ್ತಿತ್ವ ಹೊಂದಿರಲಿದೆ, ಒಂದು ಸಾವಿರ ಜನರನ್ನು ಹೆಚ್ಚುವರಿಯಾಗಿ ನೇಮಕ ಮಾಡಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.