ನವದೆಹಲಿ: ಕೋವಿಡ್-19 ಮೂರನೇ ಅಲೆ ಎದುರಾದರೆ, ಪರಿಸ್ಥಿತಿಯನ್ನು ನಿಭಾಯಿಸಲು ಅಗತ್ಯವಿರುವ ಕ್ರಮಗಳ ಪಟ್ಟಿಯೊಂದನ್ನು ಸಿದ್ಧಪಡಿಸುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಕೈಗಾರಿಕಾ ರಂಗದ ಪ್ರತಿನಿಧಿಗಳಿಗೆ ಸೂಚಿಸಿದ್ದಾರೆ.
ಸಾಂಕ್ರಾಮಿಕದಿಂದ ತೊಂದರೆಗೆ ಒಳಗಾಗಬಹುದಾದ ಮಕ್ಕಳಿಗೆ ಸಹಾಯ ಮಾಡುವಂತೆಯೂ ಗೋಯಲ್ ಅವರು ಸೂಚಿಸಿದ್ದಾರೆ. ಕೋವಿಡ್‌ನಿಂದಾಗಿ ಎದುರಾಗಿರುವ ಸವಾಲುಗಳನ್ನು ನಿಭಾಯಿಸಲು ಕೈಗಾರಿಕೆಗಳು ಎಷ್ಟರಮಟ್ಟಿಗೆ ಸನ್ನದ್ಧವಾಗಿವೆ ಎಂಬುದನ್ನು ಪರಿಶೀಲಿಸಲು ಗೋಯಲ್ ಅವರು ಮಂಗಳವಾರ ಸಭೆ ನಡೆಸಿದ್ದರು.
ಹಿಂದಿನ ಅನುಭವಗಳಿಂದ ಒಂದಿಷ್ಟು ಪಾಠ ಕಲಿತು ಈಗಿನ ಸಂದರ್ಭವನ್ನು ಹಾಗೂ ಮುಂದಿನ ಸವಾಲನ್ನು ಎದುರಿಸಬೇಕು ಎಂದು ಅವರು ಹೇಳಿದರು. ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಸೇರಿದಂತೆ ಉದ್ಯಮಗಳ ಹಲವು ಸಂಘಟನೆಗಳ ಪ್ರತಿನಿಧಿಗಳು ಸಭೆಯಲ್ಲಿ ಇದ್ದರು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.