ADVERTISEMENT

ಸಿಎಸ್‌ಆರ್‌ ಮಾರ್ಗಸೂಚಿ ಪರಿಷ್ಕರಣೆ

ಪಿಟಿಐ
Published 20 ಅಕ್ಟೋಬರ್ 2024, 14:00 IST
Last Updated 20 ಅಕ್ಟೋಬರ್ 2024, 14:00 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಪ್ರಸಕ್ತ ಹಣಕಾಸು ವರ್ಷಕ್ಕೆ ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಗಳ (ಸಿಪಿಎಸ್ಇ) ಸಾಮಾಜಿಕ ಜವಾಬ್ದಾರಿ ನಿಧಿಯ (ಸಿಎಸ್‌ಆರ್‌) ಬಳಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ.

ಪಿಎಂ ಇಂಟರ್ನ್‌ಶಿಪ್‌ ಯೋಜನೆಗೂ ಸಿಎಸ್‌ಆರ್‌ ನಿಧಿ ಬಳಕೆಗೆ ಅವಕಾಶ ಕಲ್ಪಿಸಿದೆ. ಉದ್ದಿಮೆಗಳು ವಾರ್ಷಿಕವಾಗಿ ಶೇ 60ರಷ್ಟು ನಿಧಿಯನ್ನು ಈ ಯೋಜನೆಗೆ ವಿನಿಯೋಗಿಸಬಹುದಾಗಿದೆ. ಆರೋಗ್ಯ ಮತ್ತು ಪೋಷಣೆಗೂ ಈ ನಿಧಿ ಬಳಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2024–25ನೇ ಆರ್ಥಿಕ ವರ್ಷದಲ್ಲಿ ಸರ್ಕಾರವು 1.25 ಲಕ್ಷ ಯುವಜನರಿಗೆ ಪಿಎಂ ಇಂಟರ್ನ್‌ಶಿಪ್‌ ಯೋಜನೆಯಡಿ ವಿವಿಧ ವೃತ್ತಿ ತರಬೇತಿ ನೀಡಲಿದೆ. ಅಕ್ಟೋಬರ್‌ 25ರ ವರೆಗೂ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಕ್ಟೋಬರ್‌ 26ರಂದು ಅರ್ಜಿಗಳನ್ನು ವಿವಿಧ ವಲಯವಾರು ವಿಂಗಡಿಸಲಾಗುತ್ತದೆ.

ADVERTISEMENT

ಅಕ್ಟೋಬರ್‌ 27ರಿಂದ ನವೆಂಬರ್‌ 7ರ ವರೆಗೆ ಕಂಪನಿಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿವೆ. ಆಯ್ಕೆಯಾದವರು ನವೆಂಬರ್‌ 8ರಿಂದ 15ರ ವರೆಗೆ ತರಬೇತಿಯಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ಸೂಚಿಸಬೇಕಿದೆ. ಡಿಸೆಂಬರ್‌ನಿಂದ ಪ್ರಾಯೋಗಿಕ ತರಬೇತಿ ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.