ADVERTISEMENT

ಪಿಎನ್‌ಬಿಗೆ ₹4,306 ಕೋಟಿ ಲಾಭ

ಪಿಟಿಐ
Published 28 ಅಕ್ಟೋಬರ್ 2024, 12:58 IST
Last Updated 28 ಅಕ್ಟೋಬರ್ 2024, 12:58 IST
ಪಿಎನ್‌ಬಿ
ಪಿಎನ್‌ಬಿ   

ನವದೆಹಲಿ: ಸರ್ಕಾರಿ ಸ್ವಾಮ್ಯದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) 2024–25ರ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹4,306 ಕೋಟಿ ನಿವ್ವಳ ಲಾಭ ಗಳಿಸಿದೆ.

2023–24ರ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ₹1,756 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಲಾಭದ ಪ್ರಮಾಣ ಎರಡು ಪಟ್ಟಿಗಿಂತಲೂ ಹೆಚ್ಚು ಹೆಚ್ಚಳವಾಗಿದೆ ಎಂದು ಬ್ಯಾಂಕ್‌ ಸೋಮವಾರ ತಿಳಿಸಿದೆ.

ಕಳೆದ ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ₹29,383 ಕೋಟಿ ವರಮಾನ ಗಳಿಸಿತ್ತು. ಪ್ರಸಕ್ತ ಅವಧಿಯಲ್ಲಿ ₹34,447 ಕೋಟಿ ವರಮಾನ ಗಳಿಸಿದೆ ಎಂದು ತಿಳಿಸಿದೆ.  

ADVERTISEMENT

ಬಡ್ಡಿ ವರಮಾನವು ₹29,875 ಕೋಟಿ ಸಂಗ್ರಹಿಸಿದೆ. ವಸೂಲಾಗದ ಸಾಲದ ಸರಾಸರಿ ಪ್ರಮಾಣ ಶೇ 6.96ರಿಂದ ಶೇ 4.48ಕ್ಕೆ ಇಳಿದಿದೆ.

ನಿವ್ವಳ ಎನ್‌ಪಿಎ ಶೇ 1.47 ರಿಂದ ಶೇ 0.46ಕ್ಕೆ ಕುಸಿದಿದೆ ಎಂದು ಬ್ಯಾಂಕ್‌ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.