ADVERTISEMENT

ಪಿಎನ್‌ಬಿ, ಎಕ್ಸಿಸ್‌ ಬ್ಯಾಂಕ್ ಲಾಭ ಏರಿಕೆ

ಪಿಟಿಐ
Published 26 ಜುಲೈ 2023, 15:24 IST
Last Updated 26 ಜುಲೈ 2023, 15:24 IST
P
P   

ನವದೆಹಲಿ: ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ (ಪಿಎನ್‌ಬಿ) ಜೂನ್‌ ತ್ರೈಮಾಸಿಕದ ಲಾಭವು ನಾಲ್ಕು ಪಟ್ಟು ಹೆಚ್ಚಾಗಿದ್ದು, ₹1,255 ಕೋಟಿಗೆ ತಲುಪಿದೆ. ಅನುತ್ಪಾದಕ ಸಾಲದ ಪ್ರಮಾಣ ಕಡಿಮೆ ಆಗಿದ್ದು, ಬಡ್ಡಿ ವರಮಾನ ಜಾಸ್ತಿ ಆಗಿದ್ದು ಲಾಭ ಏರಿಕೆಗೆ ಪ್ರಮುಖ ಕಾರಣಗಳು.

ಹಿಂದಿನ ವರ್ಷದ ಇದೇ ಅವಧಿಯಲ್ಲಿ ಬ್ಯಾಂಕ್‌ನ ಲಾಭವು ₹308 ಕೋಟಿ ಆಗಿತ್ತು. ಜೂನ್‌ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ಒಟ್ಟು ವರಮಾನವು ₹28,579 ಕೋಟಿಗೆ ಏರಿಕೆ ಆಗಿದೆ. ಈ ಬಾರಿ ಬ್ಯಾಂಕ್‌ ಪಡೆದಿರುವ ಲಾಭವು 12 ತ್ರೈಮಾಸಿಕಗಳಲ್ಲಿನ ಗರಿಷ್ಠ ಎಂದು ವ್ಯವಸ್ಥಾಪಕ ನಿರ್ದೇಶಕ ಅತುಲ್ ಕುಮಾರ್ ಗೋಯಲ್ ಹೇಳಿದ್ದಾರೆ.

ಬ್ಯಾಂಕ್‌ನ ನಿವ್ವಳ ಎನ್‌ಪಿಎ ಪ್ರಮಾಣವು ಶೇ 1.98ಕ್ಕೆ ಇಳಿಕೆಯಾಗಿದೆ. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ 4.26ರಷ್ಟು ಇತ್ತು.

ADVERTISEMENT

ಎಕ್ಸಿಸ್‌ ಬ್ಯಾಂಕ್‌ ಲಾಭ ಶೇ 40 ಹೆಚ್ಚಳ:

ಖಾಸಗಿ ಸ್ವಾಮ್ಯದ ಎಕ್ಸಿಸ್‌ ಬ್ಯಾಂಕ್‌ನ ಜೂನ್‌ ತ್ರೈಮಾಸಿಕದ ಲಾಭವು ಶೇ 40.5ರಷ್ಟು ಹೆಚ್ಚಾಗಿದ್ದು, ₹5,797 ಕೋಟಿಗೆ ತಲುಪಿದೆ. ಬ್ಯಾಂಕ್‌ನ ಎನ್‌ಪಿಎ ಪ್ರಮಾಣ ತಗ್ಗಿದೆ, ಬಡ್ಡಿ ವರಮಾನವು ಹೆಚ್ಚಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಎಕ್ಸಿಸ್ ಬ್ಯಾಂಕ್‌ ₹4,125 ಕೋಟಿ ಲಾಭ ಗಳಿಸಿತ್ತು.

ಜೂನ್‌ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ಒಟ್ಟು ವರಮಾನವು ₹30,644 ಕೋಟಿಗೆ ಹೆಚ್ಚಾಗಿದೆ. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹21,657 ಕೋಟಿ ಆಗಿತ್ತು. ಬ್ಯಾಂಕ್‌ನ ನಿವ್ವಳ ಎನ್‌ಪಿಎ ಪ್ರಮಾಣವು ಶೇ 0.41ಕ್ಕೆ ಇಳಿಕೆಯಾಗಿದೆ. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ 0.64ರಷ್ಟು ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.