ನವದೆಹಲಿ: 2023–24ರ ಹಣಕಾಸು ವರ್ಷದಲ್ಲಿ ತನ್ನ ಲಾಭವು ₹7000 ಕೋಟಿ– 7500 ಕೋಟಿಯಷ್ಟು ಇರಬಹುದು ಎಂದು ಈ ಹಿಂದಿನ ಅಂದಾಜನ್ನು ಪರಿಷ್ಕರಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ತಿಳಿಸಿದೆ.
ಈ ಹಿಂದೆ, ಬ್ಯಾಂಕ್ ತನ್ನ ಲಾಭವು ₹6 ಸಾವಿರ ಕೋಟಿ ಆಗಲಿದೆ ಎಂದು ಅಂದಾಜನ್ನು ಮಾಡಿತ್ತು. ಮೂರು ತ್ರೈಮಾಸಿಕದಲ್ಲಿ ನಿವ್ವಳ ಲಾಭವು ಶೇ 253ರಷ್ಟು ಹೆಚ್ಚಾಗಿದ್ದು, ಲಾಭವು ₹5,230 ಕೋಟಿ ದಾಟಿದೆ ಎಂದು ಬ್ಯಾಂಕ್ ತಿಳಿಸಿದೆ.
ಪರಿಷ್ಕೃತ ಅಂದಾಜಿನ ಪ್ರಕಾರ ನಾಲ್ಕನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭವು ₹2 ಸಾವಿರ ಕೋಟಿಗಿಂತ ಹೆಚ್ಚಿರಲಿದೆ. ಮೂರನೇ ತ್ರೈಮಾಸಿಕದಲ್ಲಿ ಬ್ಯಾಂಕ್ ₹2,223 ಕೋಟಿ ಲಾಭ ಗಳಿಸಿದೆ.
2023–24ರ ಹಣಕಾಸು ವರ್ಷದಲ್ಲಿ ಬ್ಯಾಂಕ್ ಈ ಹಿಂದೆ ಅಂದಾಜಿಸಿದ್ದ ನಿವ್ವಳ ಲಾಭದ ಗುರಿ ₹6 ಸಾವಿರ ಕೋಟಿಯನ್ನು ಪರಿಷ್ಕರಿಸಿದೆ. ಲಾಭವು ₹7000 ಕೋಟಿ– ₹7,500 ಕೋಟಿ ಆಗಲಿದೆ ಎಂದು ಈಗ ಅಂದಾಜಿಸಿದೆ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅತುಲ್ ಕುಮಾರ್ ಗೋಯಲ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.