ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್–ಅಕ್ಟೋಬರ್ ಅವಧಿಯಲ್ಲಿ ದೇಶೀಯ ವಿದ್ಯುತ್ ವಲಯವು 3.53 ಕೋಟಿ ಟನ್‌ನಷ್ಟು ಕಲ್ಲಿದ್ದಲನ್ನು ಆಮದು ಮಾಡಿಕೊಂಡಿದೆ.
ಆಮದು ಕಲ್ಲಿದ್ದಲು ಆಧಾರಿತವಾಗಿ ನಡೆಯುವ ವಿದ್ಯುತ್ ಸ್ಥಾವರಗಳು 2.17 ಕೋಟಿ ಟನ್ ಕಲ್ಲಿದ್ದಲನ್ನು ಆಮದು ಮಾಡಿಕೊಂಡಿವೆ ಎಂದು ಕೇಂದ್ರ ಸಚಿವ ಆರ್.ಕೆ. ಸಿಂಗ್ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. ಥರ್ಮಲ್ ಘಟಕಗಳು 1.36 ಕೋಟಿ ಟನ್‌ನಷ್ಟು ಕಲ್ಲಿದ್ದಲನ್ನು ಆಮದು ಮಾಡಿಕೊಂಡಿವೆ ಎಂದು ಹೇಳಿದ್ದಾರೆ.
2022–23ರ ಹಣಕಾಸು ವರ್ಷದಲ್ಲಿ ಒಟ್ಟು 5.56 ಕೋಟಿ ಟನ್ ಆಮದು ಮಾಡಿಕೊಳ್ಳಲಾಗಿತ್ತು. ಇದರಲ್ಲಿ ಆಮದು ಆಧಾರಿತ ಸ್ಥಾವರಗಳು 2.05 ಕೋಟಿ ಟನ್ ಮತ್ತು ಉಳಿದ 3.51 ಕೋಟಿ ಟನ್ ಕಲ್ಲಿದ್ದಲ್ಲನ್ನು ಥರ್ಮಲ್ ಸ್ಥಾವರಗಳು ಆಮದು ಮಾಡಿಕೊಂಡಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.