ನವದೆಹಲಿ: ಈ ವರ್ಷ ಭಾರತದಲ್ಲಿ ಐಫೋನ್‌ಗಳ ತಯಾರಿಕೆ ದೊಡ್ಡ ಪ್ರಮಾಣದಲ್ಲಿ ನಡೆಯಲಿದೆ ಎಂದು ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್‌ನ ಅಧ್ಯಕ್ಷ ಟೆರ್ರಿ ಗೌ ಹೇಳಿದ್ದಾರೆ.
ಆ್ಯಪಲ್ ಇಂಕ್‌ನ ಮೊಬೈಲ್‌ಗಳನ್ನು ಸ್ಥಳೀಯವಾಗಿ ಜೋಡಿಸುವ ಸಂಸ್ಥೆಯು ಈಗ ಐಫೋನ್‌ಗಳ ತಯಾರಿಕೆಗೆ ಸಂಬಂಧಿಸಿದ ತನ್ನ ನೀತಿಯಲ್ಲಿ ಬದಲಾವಣೆ ಮಾಡಲಿದೆ.
ಇದನ್ನೂ ಓದಿ:ಐಫೋನ್ 10ಆರ್ ಬೆಲೆ ಇಳಿಕೆ
‘ಭಾರತದ ಸ್ಮಾರ್ಟ್‌ಫೋನ್ ತಯಾರಿಕೆ ಉದ್ದಿಮೆಯಲ್ಲಿ ನಾವು ಭವಿಷ್ಯದಲ್ಲಿ ತುಂಬ ಮಹತ್ವದ ಪಾತ್ರ ನಿರ್ವಹಿಸಲಿದ್ದೇವೆ. ನಾವು ನಮ್ಮ ತಯಾರಿಕಾ ಘಟಕವನ್ನು ಭಾರತಕ್ಕೆ ವಿಸ್ತರಿಸಲಿದ್ದೇವೆ’ ಎಂದೂ ಟೆರ್ರಿ ಅವರು ತೈವಾನ್‌ನಲ್ಲಿ ನಡೆದ ಸಮಾರಂಭದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.