ADVERTISEMENT

ರೇಮಂಡ್‌ ಮಂಡಳಿಯಿಂದ ಗೌತಮ್‌ ದೂರವಿಡಿ: ಐಐಎಎಸ್‌ ಕೋರಿಕೆ

ಷೇರುದಾರರಿಗೆ ಹೂಡಿಕೆದಾರರ ಸಲಹಾ ‌ಸೇವಾ ಸಂಸ್ಥೆ ಕೋರಿಕೆ

ಪಿಟಿಐ
Published 19 ಜೂನ್ 2024, 16:20 IST
Last Updated 19 ಜೂನ್ 2024, 16:20 IST
ಗೌತಮ್‌ ಸಿಂಘಾನಿಯಾ 
ಗೌತಮ್‌ ಸಿಂಘಾನಿಯಾ     

ನವದೆಹಲಿ: ರೇಮಂಡ್‌ ಸಮೂಹದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಪುನರಾಯ್ಕೆ ಬಯಸಿರುವ ಗೌತಮ್‌ ಸಿಂಘಾನಿಯಾ ವಿರುದ್ಧ ಷೇರುದಾರರು ಮತ ಚಲಾಯಿಸಬೇಕು ಎಂದು ಸಾಂಸ್ಥಿಕ ಹೂಡಿಕೆದಾರರ ಸಲಹಾ ‌ಸೇವಾ ಸಂಸ್ಥೆ (ಐಐಎಎಸ್‌) ಕೋರಿದೆ.

ಗೌತಮ್‌ ಅವರು ಮುಂದಿನ ಐದು ವರ್ಷ ಕಾಲ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಮರು ಆಯ್ಕೆ ಬಯಸಿದ್ದಾರೆ. ಇದಕ್ಕೆ ಕಂಪನಿಯ ಆಡಳಿತ ಮಂಡಳಿಯು ಒಪ್ಪಿಗೆ ನೀಡಿದೆ.  

ಜೂನ್‌ 27ರಂದು ಕಂಪನಿಯ ವಾರ್ಷಿಕ ಸಭೆ ನಡೆಯಲಿದೆ. ಸಭೆಯಲ್ಲಿ ಷೇರುದಾರರು ಒಪ್ಪಿಗೆ ನೀಡಿದರೆ ಆಡಳಿತ ಮಂಡಳಿಯ ನಿರ್ದೇಶಕ ಹಾಗೂ ಮೂರು ವರ್ಷಗಳ ಕಾಲ ಮುಖ್ಯ ಪ್ರಧಾನ ವ್ಯವಸ್ಥಾಪಕರಾಗಿ ಅವರು ಮುಂದುವರಿಯಲಿದ್ದಾರೆ.

ADVERTISEMENT

ಗೌತಮ್‌ ಸಿಂಘಾನಿಯ ನನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಅವರ ಪತ್ನಿ ನವಾಜ್‌ ಮೋದಿ ದೂರಿದ್ದಾರೆ. ಈ ಇಬ್ಬರ ವಿಚ್ಛೇದನ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಸಂಸ್ಥೆ ಹೇಳಿದೆ.   

ಅಲ್ಲದೆ, ಗೌತಮ್‌ ಅವರು ಕಂಪನಿಯು ಹಣವನ್ನು ವೈಯಕ್ತಿಕ ಉದ್ದೇಶಕ್ಕೆ ದುರ್ಬಳಕೆ ಮಾಡಿದ್ದಾರೆ ಎಂದು ಪತ್ನಿಯೇ ಆರೋಪಿಸಿದ್ದಾರೆ. ಆಡಳಿತ ಮಂಡಳಿಯು ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ. ನಿಯಮ ಉಲ್ಲಂಘಿಸಿ ವಾರ್ಷಿಕ ಸಂಬಳವನ್ನು ₹35 ಕೋಟಿಗೆ ಹೆಚ್ಚಿಸಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಹೇಳಿದೆ. 

ವಿಚ್ಛೇದನ ಪ್ರಕರಣ ಇತ್ಯರ್ಥವಾಗಬೇಕು. ಹಣ ದುರ್ಬಳಕೆಗೆ ಸಂಬಂಧಿಸಿದಂತೆ ಸ್ವತಂತ್ರವಾಗಿ ತನಿಖೆ ನಡೆಸಬೇಕು. ಅಲ್ಲಿಯವರೆಗೂ ಈ ಇಬ್ಬರನ್ನೂ ಷೇರುದಾರರು ಆಡಳಿತ ಮಂಡಳಿಯಿಂದ ಹೊರಗಿಡಬೇಕು ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.