ADVERTISEMENT

ಇ–ಮಾರುಕಟ್ಟೆ ಪೋರ್ಟಲ್‌ ಜಿಇಎಂ: ಪ್ರಸಕ್ತ ವರ್ಷ ₹3 ಲಕ್ಷ ಕೋಟಿ ವಹಿವಾಟು

ಪಿಟಿಐ
Published 16 ನವೆಂಬರ್ 2024, 13:44 IST
Last Updated 16 ನವೆಂಬರ್ 2024, 13:44 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

‌‌ನವದೆಹಲಿ: ಸರ್ಕಾರದ ಇ–ಮಾರುಕಟ್ಟೆ ಪೋರ್ಟಲ್‌ ಆದ ‘ಜಿಇಎಂ’ನಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇಲ್ಲಿಯವರೆಗೆ ₹3 ಲಕ್ಷ ಕೋಟಿ ವಹಿವಾಟು ನಡೆದಿದೆ. 

ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಿಂದ ಹೆಚ್ಚಿನ ಖರೀದಿ ನಡೆದಿರುವುದರಿಂದ ಇಷ್ಟು ಮೊತ್ತದ ವಹಿವಾಟು ನಡೆದಿದೆ. 2023–24ನೇ ಆರ್ಥಿಕ ವರ್ಷದಲ್ಲಿ ₹4 ಲಕ್ಷ ಕೋಟಿ ವಹಿವಾಟು ನಡೆದಿತ್ತು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

2016ರ ಆಗಸ್ಟ್‌ 9ರಂದು ಈ ಪೋರ್ಟಲ್‌ ಕಾರ್ಯಾರಂಭ ಮಾಡಿತು. ಸರ್ಕಾರಿ ಕಚೇರಿಗಳು, ಸಾರ್ವಜನಿಕ ವಲಯದ ಉದ್ದಿಮೆಗಳು, ಸರಕು ಮತ್ತು ಸೇವೆ ಪಡೆಯಲು ಈ ಆನ್‌ಲೈನ್‌ ವೇದಿಕೆಯು ನೆರವಾಗಲಿದೆ.

ADVERTISEMENT

ಈ ವೇದಿಕೆಯಡಿ ವಹಿವಾಟು ನಡೆಸುವುದಕ್ಕೆ ಸಂಬಂಧಿಸಿದಂತೆ ಅಕ್ಟೋಬರ್‌ನಲ್ಲಿ ಜಿಇಎಂ ಜೊತೆಗೆ ಸಿಕ್ಕಿಂ ರಾಜ್ಯವು ಒಡಂಬಡಿಕೆ ಮಾಡಿಕೊಂಡಿದೆ. ಹಾಗಾಗಿ, ದೇಶದ ಎಲ್ಲಾ ರಾಜ್ಯಗಳು ಈ ವೇದಿಕೆಯಡಿ ಬಂದಿವೆ ಎಂದು ತಿಳಿಸಿದೆ.

ಸರ್ಕಾರದ ದೊಡ್ಡ ಏಜೆನ್ಸಿಗಳನ್ನು ಹೊರತುಪಡಿಸಿ ಪಂಚಾಯಿತಿಗಳು ಮತ್ತು ಸಹಕಾರ ಸಂಘಗಳು ಈ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿವೆ. ಅಕ್ಟೋಬರ್‌ನಲ್ಲಿ ₹30,264 ಕೋಟಿ ವಹಿವಾಟು ನಡೆದಿದೆ ಎಂದು ವಿವರಿಸಿದೆ.

9.7 ಲಕ್ಷ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳು ಈ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿವೆ. ಒಟ್ಟಾರೆ ₹4.9 ಲಕ್ಷ ಕೋಟಿ ಆರ್ಡರ್‌ಗಳನ್ನು ಪಡೆದಿವೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.