ನವದೆಹಲಿ: ಈ ವರ್ಷದೊಳಗೆ ದೇಶದಾದ್ಯಂತ ಒಂದು ಕೋಟಿ ಸಾರ್ವಜನಿಕ ವೈಫೈ ಹಾಟ್‌ಸ್ಪಾಟ್‌ಗಳನ್ನು ಸ್ಥಾಪಿಸುವುದರಿಂದ 2 ರಿಂದ 3 ಕೋಟಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ದೂರಸಂಪರ್ಕ ಸಚಿವ ಕೆ. ರಾಜಾರಾಮನ್ ಹೇಳಿದ್ದಾರೆ.
ಬ್ರಾಡ್‌ಬ್ಯಾಂಡ್ ಇಂಡಿಯಾ ಫೋರಂ (ಬಿಐಎಫ್) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ಒಂದು ಹಾಟ್‌ಸ್ಟಾಟ್‌ನಿಂದ ನೇರ ಮತ್ತು ಪರೋಕ್ಷವಾಗಿ 2 ರಿಂದ 3 ಉದ್ಯೋಗಾವಕಾಶಗಳು ಸೃಷ್ಟಿಯಾಗುವ ಅಂದಾಜು ಮಾಡಲಾಗಿದೆ. ರಾಷ್ಟ್ರೀಯ ಡಿಜಿಟಲ್ ಸಂವಹನ ನೀತಿಯ (ಎನ್‌ಡಿಸಿಪಿ) 2022ರೊಳಗೆ 1 ಕೋಟಿ ಹಾಟ್‌ಸ್ಟಾಟ್ ಅಳವಡಿಸುವ ಗುರಿ ಇಟ್ಟುಕೊಂಡಿದೆ. ಈ ಹಾಟ್‌ಸ್ಪಾಟ್‌ಗಳು ಸಣ್ಣ ಮತ್ತು ಮಧ್ಯಮ ಗಾತ್ರದ ವಲಯಗಳಲ್ಲಿ 2 ರಿಂದ 3 ಕೋಟಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ತಿಳಿಸಿದ್ದಾರೆ.
ದೇಶದಾದ್ಯಂತ ವೈಫೈ ಹಾಟ್‌ಸ್ಪಾಟ್‌ಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿರುವ ಪ್ರಧಾನ ಮಂತ್ರಿಗಳ ವೈ-ಫೈ ಅಕ್ಸೆಸ್ ನೆಟ್‌ವರ್ಕ್ ಇಂಟರ್‌ಫೇಸ್ (ಪಿಎಂ-ವಾಣಿ) ಯೋಜನೆಯ ವಿಸ್ತರಣೆಗಾಗಿ ತಮ್ಮ ಉತ್ಪನ್ನಗಳ ಬೆಲೆಯನ್ನು ಕಡಿಮೆ ಮಾಡುವಂತೆ ವೈ–ಫೈ ಉಪಕರಣ ತಯಾರಕರಿಗೆಕಾರ್ಯಕ್ರಮದಲ್ಲಿ ಕರೆ ನೀಡಲಾಯಿತು.
ಪಿಎಂ ವಾಣಿ ಯೋಜನೆಗಾಗಿ ಲಕ್ಷಾಂತರ ಉತ್ಪನ್ನಗಳ ತಯಾರಿಕೆ ಅಗತ್ಯವಿದ್ದು, ಇದರಿಂದಾಗಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿದೆ ಎಂದು ರಾಜಾರಾಮನ್ ಹೇಳಿದ್ದಾರೆ. ಯೋಜನೆಯಡಿ ಈವರೆಗೆ ದೇಶದಾದ್ಯಂತ 56 ಸಾವಿರಕ್ಕೂ ಅಧಿಕ ವೈಫೈ ಹಾಟ್‌ಸ್ಟಾಟ್ ಸ್ಥಾಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.