ಧಾರವಾಡ: ಬ್ಯಾಂಕ್ ಖಾತೆಯಲ್ಲಿ ಹಣವಿದ್ದರೂ ಅಮಾನ್ಯ ಮಾಡಿರುವುದು ಹಾಗೂ ಬೇರೆಯವರ ತಪ್ಪಿಗೆ ಗ್ರಾಹಕನಿಗೆ ಮಾನಸಿಕ ಕಿರುಕುಳ ನೀಡಿದ ಆರೋಪದ ಪ್ರಕರಣ ದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ₹50ಸಾವಿರ ದಂಡ ವಿಧಿಸಿದೆ.
ನಗರದ ಗಾಂಧಿ ಚೌಕದ ನಂದಕುಮಾರ ಜೋಶಿ ಎಂಬು ವವರು ಹೆಸ್ಕಾಂ ವಿದ್ಯುತ್ ಬಿಲ್ ಪಾವತಿಗೆ ₹236ರ ಚೆಕ್ ಅನ್ನು ನೀಡಿದ್ದರು. ಖಾತೆಯಲ್ಲಿ ಸಾಕಷ್ಟು ಹಣವಿದ್ದರೂ, ನಗದು ಆಗದೆ ಚೆಕ್ ಮರಳಿತ್ತು. ಮರು ದಿನ ಚೆಕ್ ಹಾಕಿದಾಗ ಅದು ನಗದಾಯಿತು. ಆದರೆ ಪಾಸ್ ಪುಸ್ತಕದಲ್ಲಿ ಸಮರ್ಪಕ ಹಣವಿಲ್ಲ ಎಂದು ನಮೂದಾಗಿತ್ತು.
‘ಇದನ್ನು ವಿಚಾರಿಸಿ ದಾಗ ಬೇರೆಯವರ ಕರ್ನಾಟಕ ಬ್ಯಾಂಕಿಗೆ ಸೇರಿದ ₹40,632 ಚೆಕ್ ಕಳುಹಿಸಿದ್ದು, ಅದರಲ್ಲಿ ಹಣವಿಲ್ಲದ ಕಾರಣ ಚೆಕ್ ವಾಪಾಸ್ ಆಯುತು ಎಂದಿದ್ದಾರೆ. ಆದರೆ ಹಣವಿಲ್ಲ ಎಂದು ಚೆಕ್ ಮರಳಿಸಿದ್ದು, ಮುಜುಗರ ತಂದಿದೆ. ಈ ಕುರಿತು ನ್ಯಾಯ ದೊರಕಿಸಬೇಕು’ ಎಂದು ದೂರು ದಾರರು ಆಯೋಗವನ್ನು ಕೋರಿದ್ದರು.
ಅರ್ಜಿಯ ವಿಚಾರಣೆಯನ್ನು ಆಯೋಗದ ಅಧ್ಯಕ್ಷ ಈಶಪ್ಪ ಕೆ. ಭೂತೆ, ಸದಸ್ಯರಾದ ಪಿ.ಸಿ.ಹಿರೇಮಠ ಹಾಗೂ ವಿ.ಎ.ಬೋಳಶೆಟ್ಟಿ ನಡೆಸಿದರು.
ಈ ಪ್ರಕರಣ ಕುರಿತು ಹೆಸ್ಕಾಂ ಹಾಗೂ ಬ್ಯಾಂಕ್‌ಗೆ ನೋಟಿಸ್ ಜಾರಿಗೊಳಿಸಲಾಗಿತ್ತು. ದೂರುದಾರರ ಖಾತೆಯಲ್ಲಿ ಹಣವಿದ್ದರೂ ಚೆಕ್ ಅಮಾನ್ಯಗೊಳಿಸಿದ್ದರಿಂದ ಆದ ಮಾನಸಿಕ ವ್ಯಥೆಗೆ ₹50ಸಾವಿರ ಪರಿಹಾರ ಮತ್ತು ₹10ಸಾವಿರ ಪ್ರಕರಣದ ವೆಚ್ಚವನ್ನು ಆದೇಶವಾದ ಒಂದು ತಿಂಗಳ ಒಳಗಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಆದೇಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.