ADVERTISEMENT

ಪಂಜಾಬ್‌ನಲ್ಲಿ 85 ಲಕ್ಷ ಟನ್‌ ಭತ್ತ ಖರೀದಿ

ಪಿಟಿಐ
Published 3 ನವೆಂಬರ್ 2024, 12:34 IST
Last Updated 3 ನವೆಂಬರ್ 2024, 12:34 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: 2024–25ನೇ ಸಾಲಿನ ಮಾರುಕಟ್ಟೆ ವರ್ಷದಲ್ಲಿ ಪಂಜಾಬ್‌ನಲ್ಲಿ ಇಲ್ಲಿಯವರೆಗೆ 85.41 ಲಕ್ಷ ಟನ್‌ ಭತ್ತ ಖರೀದಿಸಲಾಗಿದೆ ಎಂದು ಕೇಂದ್ರ ಆಹಾರ ಸಚಿವಾಲಯ ಭಾನುವಾರ ತಿಳಿಸಿದೆ. 

‘ಭಾರತೀಯ ಆಹಾರ ನಿಗಮದ ರಾಜ್ಯ ಘಟಕದಿಂದ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. 4 ಲಕ್ಷಕ್ಕೂ ಹೆಚ್ಚು ರೈತರ ಬ್ಯಾಂಕ್‌ ಖಾತೆಗಳಿಗೆ ₹19,800 ಕೋಟಿ ಪಾವತಿಸಲಾಗಿದೆ’ ಎಂದು ತಿಳಿಸಿದೆ.

ಈ ಋತುವಿನಲ್ಲಿ ಪಂಜಾಬ್‌ನಿಂದ 185 ಲಕ್ಷ ಟನ್‌ ಭತ್ತ ಖರೀದಿಸುವ ಗುರಿ ಹೊಂದಲಾಗಿದೆ. ‘ಎ’ ಗ್ರೇಡ್‌ ಭತ್ತಕ್ಕೆ ₹2,320 ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.