ಮುಂಬೈ: ಗ್ರಾಹಕರಿಗೆ ತ್ವರಿತವಾಗಿ ಸರಕುಗಳನ್ನು ಪೂರೈಸುವ ಕ್ವಿಕ್ ಕಾಮರ್ಸ್ ವೇದಿಕೆಗಳು ಸ್ಥಳೀಯ ಚಿಲ್ಲರೆ ವ್ಯಾಪಾರಿಗಳಿಗೆ ಸವಾಲಾಗಿ ಪರಿಣಮಿಸಿವೆ. ಇದು ರಾಜಕೀಯ ವಿಷಯವೂ ಆಗುತ್ತಿದೆ ಎಂದು ಕೋಟಕ್ ಮಹೀಂದ್ರ ಬ್ಯಾಂಕ್‌ನ ಸಂಸ್ಥಾಪಕ ಮತ್ತು ಕಾರ್ಯ ನಿರ್ವಾಹಕೇತರ ನಿರ್ದೇಶಕ ಉದಯ್ ಕೋಟಕ್ ಅಭಿಪ್ರಾಯಪಟ್ಟಿದ್ದಾರೆ.
ದೇಶದ ವ್ಯಾಪಾರವು ಮುಕ್ತ ಮತ್ತು ನ್ಯಾಯಸಮ್ಮತ ವಹಿವಾಟಿನಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗುತ್ತಿದೆ. ಭಾರತದಲ್ಲಿ ಮಾತ್ರವೇ ತ್ವರಿತ ಸೇವೆಯ ಚಿಲ್ಲರೆ ವ್ಯಾಪಾರವು ಯಶಸ್ವಿಯಾಗಿದೆ. ಜಗತ್ತಿನ ಬೇರೆ ಯಾವುದೇ ಭಾಗದಲ್ಲಿ ಈ ಮಾದರಿಯು ಪರಿಣಾಮಕಾರಿಯಾಗಿಲ್ಲ ಎಂದು ಇಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಆ್ಯಪಲ್, ಮೆಟಾ, ಯೂನಿಲಿವರ್ ಸೇರಿ ಇತರೆ ಕಂಪನಿಗಳ ಉತ್ಪನ್ನಗಳು ಭಾರತದ ಗ್ರಾಹಕರನ್ನು ಇನ್ನೂ ತಲುಪಿಲ್ಲ. ಉತ್ಪನ್ನ ಮತ್ತು ಸೃಜನಶೀಲತೆಯ ಮೇಲೆ ಗುರಿ ಕೇಂದ್ರೀಕರಿಸಲು ಭಾರತದ ವ್ಯವಹಾರಗಳನ್ನು ಉತ್ತೇಜಿಸಬೇಕಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.