ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS)ನ ಮುಖ್ಯ ಕಾರ್ಯನಿರ್ವಾಹಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಸ್ಥಾನದಿಂದ ರಾಜೇಶ್ ಗೋಪಿನಾಥನ್ ಅವರು ಕೆಳಗಿಳಿದಿದ್ದಾರೆ.
ಕೆ. ಕೃತಿವಾಸನ್ ಅವರು ರಾಜೇಶ್ ಅವರ ಉತ್ತರಾಧಿಕಾರಿಯಾಗಿರಲಿದ್ದಾರೆ ಎಂದು ಟಿಸಿಎಸ್ ಹೇಳಿದೆ.
‘ರಾಜೇಶ್ ಗೋಪಿನಾಥನ್ ಅವರು ರಾಜೀನಾಮೆ ನೀಡಿದ್ದಾರೆ ಎಂದು ನಾವು ಈ ಮೂಲಕ ತಿಳಿಯಪಡಿಸುತ್ತೇವೆ. ಅವರ ರಾಜೀನಾಮೆಯು 2023 ಸೆಪ್ಟೆಂಬರ್ 15ರಿಂದ ಜಾರಿಗೊಳ್ಳಲಿದೆ. ಅಲ್ಲಿಯವರೆಗೆ ಅವರು ತಮ್ಮ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂದು ಟಿಸಿಎಸ್ ಗುರುವಾರ ಸಲ್ಲಿಸಿದ ವಿನಿಮಯ ಫೈಲಿಂಗ್‌ನಲ್ಲಿ ಹೇಳಿದೆ.
ಸದ್ಯ ಟಿಸಿಎಸ್‌ನ ಬಿಎಫ್‌ಎಸ್‌ಐ ವರ್ಟಿಕಲ್‌ನ ಗ್ಲೋಬಲ್ ಹೆಡ್ ಆಗಿರುವ ಕೃತಿವಾಸನ್ ಅವರನ್ನು ಮಾರ್ಚ್ 16ರಿಂದ ಅನ್ವಯವಾಗುವಂತೆ ಸಿಇಒ ಆಗಿ ನೇಮಕ ಮಾಡಲಾಗಿದೆ. ಮುಂದಿನ ಹಣಕಾಸು ವರ್ಷದಿಂದ ಕೃತಿವಾಸನ್ ಅವರು ಅಧಿಕಾರ ಸ್ವೀಕಾರ ಮಾಡಲಿದ್ದಾರೆ.
ದೇಶದ ಅತೀ ದೊಡ್ಡ ಐಟಿ ಉದ್ಯಮ ಎನ್ನುವ ಖ್ಯಾತಿಗಳಿಸಿರುವ ಟಿಸಿಎಸ್‌ನ ಕಾರ್ಯನಿರ್ವಾಹಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ 2017ರಲ್ಲಿ ಗೋಪಿನಾಥನ್ ಅವರು ಅಧಿಕಾರ ಸ್ವೀಕರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.