ADVERTISEMENT

ರಾಮ್‌ರಾಜ್‌ ಕಾಟನ್‌: ದಸರಾಕ್ಕೆ 4 ಸಾವಿರ ನವೀನ ದೋತಿ ಲಭ್ಯ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2024, 16:24 IST
Last Updated 21 ಸೆಪ್ಟೆಂಬರ್ 2024, 16:24 IST
ಬೆಂಗಳೂರಿನ ಯಲಹಂಕ ಹೋಬಳಿಯ ಸಿಂಗನಾಯಕನಹಳ್ಳಿಯಲ್ಲಿ ತೆರೆದಿರುವ ರಾಮ್‌ರಾಜ್‌ ಕಾಟನ್‌ ಮಳಿಗೆಯಲ್ಲಿ ಹಾವೇರಿ ಜಿಲ್ಲೆಯ ರೈತ ಫಕ್ಕೀರಪ್ಪ ಮೆಣಸಿನಹಾಳ್ ಅವರನ್ನು ರಾಮ್‌ರಾಜ್‌ ಕಾಟನ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ಕೆ.ಆರ್‌. ನಾಗರಾಜನ್‌ ಅವರು ಸನ್ಮಾನಿಸಿದರು 
ಬೆಂಗಳೂರಿನ ಯಲಹಂಕ ಹೋಬಳಿಯ ಸಿಂಗನಾಯಕನಹಳ್ಳಿಯಲ್ಲಿ ತೆರೆದಿರುವ ರಾಮ್‌ರಾಜ್‌ ಕಾಟನ್‌ ಮಳಿಗೆಯಲ್ಲಿ ಹಾವೇರಿ ಜಿಲ್ಲೆಯ ರೈತ ಫಕ್ಕೀರಪ್ಪ ಮೆಣಸಿನಹಾಳ್ ಅವರನ್ನು ರಾಮ್‌ರಾಜ್‌ ಕಾಟನ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ಕೆ.ಆರ್‌. ನಾಗರಾಜನ್‌ ಅವರು ಸನ್ಮಾನಿಸಿದರು    

ಬೆಂಗಳೂರು: ಗ್ರಾಹಕರಿಗೆ ಒಪ್ಪುವಂತಹ ಉಡುಪು ನೀಡಲು ಬದ್ಧ. ದಸರಾ ಹಬ್ಬದ ಋತುವಿನಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ನವೀನ ದೋತಿಗಳು ಮಳಿಗೆಗಳಲ್ಲಿ ಲಭ್ಯವಿವೆ ಎಂದು ರಾಮ್‌ರಾಜ್‌ ಕಾಟನ್‌ ತಿಳಿಸಿದೆ.

ನಟ ರಿಷಭ್‌ ಶೆಟ್ಟಿ ಅವರು ರಾಮ್‌ರಾಜ್‌ ಕಾಟನ್‌ನ ಪ್ರಚಾರ ರಾಯಭಾರಿಯಾಗಿದ್ದಾರೆ. ಕರ್ನಾಟಕದ ಜನರ ಸಂಸ್ಕೃತಿಯನ್ನು ಗೌರವಿಸುವ ಜೊತೆಗೆ ಚಿಲ್ಲರೆ ಮಾರಾಟವನ್ನು ಮತ್ತಷ್ಟು ಸದೃಢಗೊಳಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದೆ.

ಪರಂಪರೆಯ ದ್ಯೋತಕವಾದ ದೋತಿಯ ಮಹತ್ವ ಕುರಿತು ಹೆಚ್ಚು ಪ್ರಚಾರ ಮಾಡಲಾಗುವುದು. ಎಲ್ಲಾ ವರ್ಗದ ಗ್ರಾಹಕರಲ್ಲಿ ಈ ಸಂಸ್ಕೃತಿ ಬಗ್ಗೆ ಅರಿವು ಮೂಡಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದೆ.

ADVERTISEMENT

ಹೊಸ ಮಳಿಗೆ ಉದ್ಘಾಟನೆ:

ಯಲಹಂಕ ಹೋಬಳಿಯ ಸಿಂಗನಾಯಕನಹಳ್ಳಿಯಲ್ಲಿ ಇತ್ತೀಚೆಗೆ ರಾಮ್‌ರಾಜ್ ಕಾಟನ್‌ನ ಹೊಸ ಮಳಿಗೆಯನ್ನು ಯಲಹಂಕ ಶಾಸಕ ಎಸ್‌.ಆರ್‌. ವಿಶ್ವನಾಥ್ ಉದ್ಘಾಟಿಸಿದರು.  

ಪಂಚೆಯುಟ್ಟಿದ್ದಕ್ಕೆ ಮಾಲ್‌ನೊಳಗೆ ಪ್ರವೇಶಿಸಲು ಬಿಡದೆ ಅವಮಾನ ಅನುಭವಿಸಿದ್ದ ಹಾವೇರಿಯ ರೈತ ಫಕ್ಕೀರಪ್ಪ ಮೆಣಸಿನಹಾಳ್ ಅವರನ್ನು ರಾಮ್‌ರಾಜ್‌ ಕಾಟನ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ಕೆ.ಆರ್‌. ನಾಗರಾಜನ್‌ ಅವರು ಮಳಿಗೆಯಲ್ಲಿ ಸನ್ಮಾನಿಸಿದರು. 

ಬಳಿಕ ಮಾತನಾಡಿದ ಅವರು, ‘ಭಾರತೀಯ ಸಂಸ್ಕೃತಿಯು ಮೌಲ್ಯಯುತವಾಗಿದೆ. ಯುವಪೀಳಿಗೆಯು ಆ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಫಕ್ಕೀರಪ್ಪ ಅವರು ಸಾಂಪ್ರದಾಯಿಕ ದೋತಿ ಧರಿಸಿರುವುದು ಹೆಮ್ಮೆಯ ಸಂಗತಿ. ಇದು ನಮ್ಮ ಸಂಸ್ಕೃತಿ ರಕ್ಷಣೆಯ ಸಂಕೇತವಾಗಿದೆ’ ಎಂದು ಹೇಳಿದರು.

ವಿಶ್ವವಾಣಿ ಫೌಂಡೇಶನ್‌ನ ನಿರ್ದೇಶಕ ಅಶೋಕ್‌ ವಿಶ್ವನಾಥ್‌, ಆರ್‌ಎಸ್‌ಎಸ್‌ಎನ್‌ ಬ್ಯಾಂಕ್‌  ಅಧ್ಯಕ್ಷೆ ಡಾ.ವಾಣಿಶ್ರೀ ವಿಶ್ವನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.