ನವದೆಹಲಿ: ಬೆಂಗಳೂರು ಮೂಲದ ರ‍್ಯಾಪಿಡೊ ಕಂಪನಿಯು 2023–24ನೇ ಆರ್ಥಿಕ ವರ್ಷದಲ್ಲಿ ₹370 ಕೋಟಿ ನಷ್ಟ ಅನುಭವಿಸಿದೆ.
2022-23ರಲ್ಲಿ ₹675 ಕೋಟಿ ಹಾಗೂ 2021–22ರಲ್ಲಿ ₹440 ಕೋಟಿ ನಷ್ಟವಾಗಿತ್ತು. ಸತತ ಮೂರು ವರ್ಷದಿಂದ ಕಂಪನಿಯು ನಷ್ಟದ ಹಾದಿಯಲ್ಲಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
2022–23ರಲ್ಲಿ ಕಂಪನಿಯು ₹443 ಕೋಟಿ ವರಮಾನಗಳಿಸಿತ್ತು. 2023–24ರಲ್ಲಿ ₹648 ಕೋಟಿ ಗಳಿಸಿದೆ. ಒಟ್ಟಾರೆ ವರಮಾನದಲ್ಲಿ ಶೇ 46.3ರಷ್ಟು ಏರಿಕೆಯಾಗಿದೆ.
ಪ್ರಸಕ್ತ ಆರ್ಥಿಕ ವರ್ಷದ ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ ಕಂಪನಿಯು ₹17 ಕೋಟಿ ನಷ್ಟ ಅನುಭವಿಸಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹74 ಕೋಟಿ ನಷ್ಟ ಕಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.