ADVERTISEMENT

ಬೆಂಗಳೂರಿನಲ್ಲಿ ರ್‍ಯಾಪಿಡೊ ಕ್ಯಾಬ್‌ ಸೇವೆ

ಪಿಟಿಐ
Published 5 ಡಿಸೆಂಬರ್ 2023, 20:08 IST
Last Updated 5 ಡಿಸೆಂಬರ್ 2023, 20:08 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಬೈಕ್‌ ಟ್ಯಾಕ್ಸಿ ಸೇವೆಗೆ ಜನಪ್ರಿಯ ಆಗಿರುವ ರ್‍ಯಾಪಿಡೊ ಕಂಪನಿಯು ಕ್ಯಾಬ್‌ ಸೇವೆಗೆ ಆರಂಭಿಸಿರುವುದಾಗಿ ಮಂಗಳವಾರ ಘೋಷಿಸಿದೆ. ಬೆಂಗಳೂರು, ಹೈದರಾಬಾದ್‌, ದೆಹಲಿ–ಎನ್‌ಸಿಆರ್‌ನಲ್ಲಿ 1.2 ಲಕ್ಷ ಕ್ಯಾಬ್‌ಗಳೊಂದಿಗೆ ಸೇವೆ ಆರಂಭಿಸಿದ್ದು, 2024ರ ಸೆಪ್ಟೆಂಬರ್ ವೇಳೆಗೆ 35 ನಗರಗಳಿಗೆ ಸೇವೆಯನ್ನು ವಿಸ್ತರಿಸುವ ಯೋಜನೆ ಹೊಂದಿರುವುದಾಗಿ ಕಂಪನಿಯ ಸಂಸ್ಥಾಪಕ ಪವನ್‌ ಗುಂತುಪಲ್ಲಿ ತಿಳಿಸಿದ್ದಾರೆ.

ಶೂನ್ಯ ಕಮಿಷನ್‌ ಮಾದರಿಯ ಮೂಲಕ ಚಾಲಕರ ವರಮಾನ ಹೆಚ್ಚಿಸಲಾಗುವುದು. ಆದರೆ ಬಳಕೆದಾರರಿಗೆ ಹೊರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. 

ಕ್ಯಾಬ್‌ ಚಾಲಕರು ಗ್ರಾಹಕರಿಂದ ನೇರವಾಗಿ ಹಣ ಪಡೆಯಲಿದ್ದಾರೆ. ರ್‍ಯಾಪಿಡೊ ಕಂಪನಿಯು ಯಾವುದೇ ಕಮಿಷನ್‌ ಕಡಿತ ಮಾಡುವುದಿಲ್ಲ. ಆದರೆ, ನಿರ್ದಿಷ್ಟ ಮಟ್ಟದ ಗಳಿಕೆಯನ್ನು ಮೀರಿದ ಬಳಿಕ ಚಂದಾದಾರಿಕೆ ಶುಲ್ಕವನ್ನು ಪಾವತಿಸಬೇಕಾಗಲಿದೆ ಎಂದು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.