ಬೆಂಗಳೂರು: ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ನ (ಐಒಸಿ) ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕಿಯಾಗಿ ರಶ್ಮಿ ಗೋವಿಲ್ ಅಧಿಕಾರ ಸ್ವೀಕರಿಸಿದ್ದಾರೆ.
ಎಂಬಿಎ ಮತ್ತು ಹಣಕಾಸು ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮೊ ವ್ಯಾಸಂಗ ಮಾಡಿರುವ ಅವರು, 1994ರಲ್ಲಿ ಕಂಪನಿಗೆ ಸೇರಿದರು. ಇಂಡಿಯನ್ ಆಯಿಲ್ ರಿಫೈನರೀಸ್‌ನ ಕೇಂದ್ರ ಕಚೇರಿ, ಮಥುರಾ ರಿಫೈನರಿ ಘಟಕ ಮತ್ತು ಕಂಪನಿಯ ಕಾರ್ಪೊರೇಟ್ ಕಚೇರಿಯಲ್ಲಿ ಕಾರ್ಯ ನಿರ್ವಾಹಕ ನಿರ್ದೇಶಕಿಯಾಗಿ (ಎಚ್‌ಆರ್‌ಡಿ ಮತ್ತು ಉದ್ಯೋಗಿ ಸಂಬಂಧಗಳು) ಸೇವೆ ಸಲ್ಲಿಸಿದ್ದಾರೆ ಎಂದು ಕಂಪನಿ ತಿಳಿಸಿದೆ.
ಮೂರು ದಶಕದ ವೃತ್ತಿ ಅನುಭವ ಹೊಂದಿರುವ ಅವರು ನೇಮಕಾತಿ, ನೀತಿ ನಿರೂಪಣೆ, ಉತ್ತರಾಧಿಕಾರ ಯೋಜನೆ ಮತ್ತು ವ್ಯವಸ್ಥೆಗಳ ನಿರ್ವಹಣೆ ಸೇರಿದಂತೆ ಕಾರ್ಯದ ಸೂಕ್ಷ್ಮ ವ್ಯತ್ಯಾಸಗಳ ಬಗ್ಗೆ ಆಳವಾದ ಜ್ಞಾನ ಹೊಂದಿದ್ದಾರೆ. ಕೊರೊನಾ ಸಮಯದಲ್ಲಿ ಉದ್ಯೋಗಿಗಳ ಯೋಗಕ್ಷೇಮದ ಮೇಲೆ ವಿಶೇಷ ಗಮನ ಕೇಂದ್ರೀಕರಿಸುವ ಮೂಲಕ ಹಲವಾರು ಪರಿಷ್ಕೃತ ನೀತಿಗಳನ್ನು ಕಾರ್ಯಗತಗೊಳಿಸಿದ್ದಾರೆ ಎಂದು ಕಂಪನಿ ತಿಳಿಸಿದೆ.
ಈ ನೇಮಕದಿಂದ ಕಂಪನಿಯ ಮಂಡಳಿಯಲ್ಲಿ ಮಹಿಳಾ ಕಾರ್ಯಕಾರಿ ನಿರ್ದೇಶಕರ ಸಂಖ್ಯೆ 2ಕ್ಕೇರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.