ನವದೆಹಲಿ: ಜನಪ್ರಿಯ ಪೇಯ ತಯಾರಿಕಾ ಕಂಪನಿ ‘ರಸ್ನಾ’ದ ಸಂಸ್ಥಾಪಕ ಅಧ್ಯಕ್ಷ ಅರೀಜ್ ಪಿರೋಜ್‌ಶಾ ಖಂಬಟ್ಟ (85) ಅವರು ಅಹಮದಾಬಾದ್‌ನಲ್ಲಿ ಹೃದಯಸ್ತಂಭನದಿಂದ ಮೃತಪಟ್ಟಿದ್ದಾರೆ.
ಅವರು ದೀರ್ಘ ಕಾಲದಿಂದ ಅನಾರೋಗ್ಯಕ್ಕೆ ಈಡಾಗಿದ್ದರು. ಅವರು ಶನಿವಾರ ಮೃತಪಟ್ಟಿದ್ದಾರೆ ಎಂದು ಕಂಪನಿಯು ಸೋಮವಾರ ತಿಳಿಸಿದೆ.
ಖಂಬಟ್ಟ ಅವರು ರಸ್ನಾ ಪೇಯದ ಪೊಟ್ಟಣಗಳನ್ನು ಕೈಗೆಟಕುವ ಬೆಲೆಗೆ 1970ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಆಗ ಮಾರುಕಟ್ಟೆಯಲ್ಲಿ ಇದ್ದ ದುಬಾರಿ ಬೆಲೆಯ ತಂಪುಪಾನೀಯಗಳಿಗೆ ಪರ್ಯಾಯವಾಗಿ ಅವರು ರಸ್ನಾ ಪೊಟ್ಟಣವನ್ನು ಮಾರುಕಟ್ಟೆಗೆ ತಂದರು. ರಸ್ನಾ ಪೊಟ್ಟಣಗಳು ದೇಶದ 18 ಲಕ್ಷ ಅಂಗಡಿಗಳಲ್ಲಿ ಸಿಗುತ್ತಿವೆ.
1980 ಹಾಗೂ 1990ರ ದಶಕದಲ್ಲಿ ಜನಪ್ರಿಯವಾಗಿದ್ದ ‘ಐ ಲವ್ ಯೂ ರಸ್ನಾ’ ಜಾಹೀರಾತು ಜನರ ಮನಸ್ಸಿನಲ್ಲಿ ಈಗಲೂ ಅಚ್ಚೊತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.